ಮದ್ಯದರಸ ಮಲ್ಯರ 3 ಕೋಟಿ ರುಪಾಯಿಯ ಕೇರಳ ಯಾತ್ರೆ

ಮದ್ಯದರಸ ಮಲ್ಯರ 3 ಕೋಟಿ ರುಪಾಯಿಯ ಕೇರಳ ಯಾತ್ರೆ
ಉದ್ದಿಮೆ ತೂರಿ, ರಾಜಕೀಯಕ್ಕೇ ಅಂಟಿಕೊಳ್ಳುವೆ ಎಂಬ ಮಾತು ಏನಾಯಿತು?

ತಿರುವನಂತಪುರಂ : ರಾಜಕೀಯಕ್ಕಾಗಿ ವ್ಯಾಪಾರದ ಕಡೆ ತಲೆ ಹಾಕಿ ಮಲಗುವುದನ್ನು ಬಿಡಲೂ ಸಿದ್ಧವಾಗಿರುವುದಾಗಿ ಹೇಳಿಕೊಂಡಿದ್ದ ವಿಜಯ್‌ ಮಲ್ಯ ಕೇರಳ ಸುತ್ತಾಟಕ್ಕೆ ಮಾಡಿರುವ ಖರ್ಚೆಷ್ಟು ಗೊತ್ತೆ ; ಕೇವಲ 3 ಕೋಟಿ ರುಪಾಯಿ. ಅಲ್ಲಿ ಮಲ್ಯ ರಾಜಕಾರಣಿ ಸ್ಟೈಲಲ್ಲೇ ಮದ್ಯೋದ್ಯಮದ ಬಗೆಗೂ ಚಿಂತಿಸಿದ್ದು ಎಷ್ಟು ಸರಿ ಅನ್ನೋದನ್ನ ರಾಜಕೀಯ ಪಂಡಿತರೇ ಚಿಂತಿಸಬೇಕು.

ಜನತಾ ಪಾರ್ಟಿಯನ್ನು ಸೆಟೆದು ನಿಲ್ಲಿಸಲು ಹೊರಟಿರುವ ಮದ್ಯದರಸ ಮಲ್ಯ ಕೇರಳ ರಾಜ್ಯದ ಉತ್ತರದ ಕೋಳಿಕೋಡೆಯಿಂದ ದಕ್ಷಿಣದ ತುದಿಯವರೆಗೆ ರಾಜಕೀಯ ಯಾತ್ರೆ ಮಾಡಿದ್ದು ಮರ್ಸಿಡೀಸ್‌ ವ್ಯಾನಿನಲ್ಲಿ. ಅವರ ಕಾರಿನ ಮುಂದೆ- ಹಿಂದೆ ಒಂದು ಡಜನ್ನು ಕಾರುಗಳು. ಹಾದಿಯ ಗುಂಟ ಬ್ಯಾನರುಗಳು, ಗಾಳಿಯಲ್ಲಿ ಕರ ಪತ್ರಗಳು.

ಕೇರಳದಲ್ಲಿ ಈಗಾಗಲೇ ಐದು ಬಾಟ್ಲಿಂಗ್‌ ಮತ್ತು ಮದ್ಯದ ಪ್ಲಾಂಟುಗಳನ್ನು ಉಳ್ಳ ಮಲ್ಯ ರಾಜಕೀಯದ ಜೊತೆಗೆ ಅಲ್ಲಿ ಉದ್ದಿಮೆಯ ಮಾತನ್ನು ಆಡಿದ್ದು ವಿಶೇಷ. ಕೇರಳದಲ್ಲಿ ಇನ್ನಷ್ಟು ಬಂಡವಾಳ ಹೂಡಲಿದ್ದೇನೆ ಅಂತ ಹೇಳಿದಾಗಲೂ ಅವರು ರಾಜಕಾರಣಿಯ ಶೈಲಿಯಲ್ಲೇ ಕೈಯಾಡಿಸಿದರು. ಮದ್ಯೋದ್ಯಮದ ವಿಷಯದಲ್ಲಿ ಸರ್ಕಾರ ತಲೆ ಹಾಕುವುದು ತರವಲ್ಲ, ಸರ್ಕಾರಕ್ಕೆ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಕೆಲಸವಿದೆ. ಖಾಸಗಿಯವರ ಕೈಗೆ ಮದ್ಯೋದ್ಯಮದ ಉಸ್ತುವಾರಿ ಕೊಟ್ಟು ಸುಮ್ಮನಾಗಬೇಕು ಎಂದು ಕೇರಳ ಸರ್ಕಾರಕ್ಕೇ ಕಿವಿಮಾತು ಹೇಳಿದರು !

ಸದ್ಯಕ್ಕೆ ಯುವಶಕ್ತಿಯನ್ನು ಕಟ್ಟುವುದು ನನ್ನ ಕನಸು ಅಂತ ಮಲ್ಯ ಹೇಳಿದಾಗ, ಯುವಕರಿಗೆ ಹೆಂಡದ ನೈವೇದ್ಯ ಜೋರಾಗೇ ಆಗಿರಬೇಕು ಅಂತ ಕೆಲವರು ಕಟಕಿಯಾಡಿಕೊಂಡದ್ದು ಸುಳ್ಳಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+