ಮೊದಲ ಬಾರಿಗೆ ಮಹಿಳೆಗೊಲಿದ ಮೈಸೂರು ಪಾಲಿಕೆ ಕುರ್ಚಿ !
ಮೊದಲ ಬಾರಿಗೆ ಮಹಿಳೆಗೊಲಿದ ಮೈಸೂರು ಪಾಲಿಕೆ ಕುರ್ಚಿ !
ಸಾಂಸ್ಕೃತಿಕ ರಾಜಧಾನಿಯ ಪ್ರಥಮ ಪ್ರಜೆಯಾಗಿ ಮೋದಾಮಣಿ ಆಯ್ಕೆ
ಮೈಸೂರು ಮಹಾನಗರ ಪಾಲಿಕೆಯ 18 ವರ್ಷಗಳ ಇತಿಹಾಸದಲ್ಲಿ ಮೇಯರ್ ಹುದ್ದೆಗೆ ಮಹಿಳಾ ಅಭ್ಯರ್ಥಿ ಆಯ್ಕೆಯಾದುದು ಇದೇ ಮೊದಲು. ಸೋಮವಾರ (ಜೂ.30) ನಡೆದ ಚುನಾವಣೆಯಲ್ಲಿ ಮೋದಾಮಣಿ ಮೇಯರ್ ಹುದ್ದೆಗೆ ಆಯ್ಕೆಯಾದರು.
ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಮೈಸೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ. ರಸ್ತೆ ರಿಪೇರಿ, ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುವುದಾಗಿ ಮೇಯರ್ ಹುದ್ದೆಗೆ ಆಯ್ಕೆಯಾದ ಸಂದರ್ಭದಲ್ಲಿ ಮೋದಾಮಣಿ ತಮ್ಮ ಕನಸುಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡರು.
ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮೋದಾಮಣಿ- ಅನೇಕ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications