ಹನಿ ಮಳೆಗೇ ಬೆಂಗಳೂರಿಗೆ ಬಂತು ಡೆಂಗ್ಯೂ ಮಹಾಮಾರಿ
ಹನಿ ಮಳೆಗೇ ಬೆಂಗಳೂರಿಗೆ ಬಂತು ಡೆಂಗ್ಯೂ ಮಹಾಮಾರಿ
15 ದಿನಗಳಲ್ಲಿ 30 ಬೆಂಗಳೂರಿಗರು ಆಸ್ಪತ್ರೆಗೆ
ಕಳೆದ ಹದಿನೈದು ದಿನಗಳಲ್ಲಿ 30 ಮಂದಿ ಡೆಂಗ್ಯೂ ಬಳಲಿಕೆಗೆ ಸಿಲುಕಿದ್ದಾರೆ. ಅದರಲ್ಲೂ ನಗರದ ಪಶ್ಚಿಮ ಭಾಗದ ಪಶ್ಚಿಮ ಕಾರ್ಡ್ ರಸ್ತೆ ಹಾಗೂ ಬಸವೇಶ್ವರ ನಗರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.
ಓಡಾಡುವ ಜಾಗದಲ್ಲಿ ತೆರೆದ ಡ್ರಮ್ಮು, ಬಕೆಟ್ಟುಗಳಲ್ಲಿ ನೀರು ಸಂಗ್ರಹಿಸಿಟ್ಟು ಬಳಸಬೇಡಿ ಎಂದು ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಲೇಕ್‌ಸೈಡ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಚ್.ಪರಮೇಶ್ ಅವರ ಪ್ರಕಾರ- ಲೇಕ್‌ಸೈಡ್ ಆಸ್ಪತ್ರೆಯಲ್ಲಿರುವ ಕೇರಳ ಮೂಲದ ಅರ್ಧದಷ್ಟು ಶುಶ್ರೂಷಕಿಯರಿಗೆ ಡೆಂಗ್ಯೂ ಹರಡಿದೆ. ಅವರೆಲ್ಲ ಹೆದರಿ ತವರಿಗೆ ಓಡಿದ್ದಾರೆ. ಈ ಆಸ್ಪತ್ರೆಯಾಂದರಲ್ಲಿ ಈಗಾಗಲೇ ಸುಮಾರು 20 ಡೆಂಗ್ಯೂಪೀಡಿತರು ಚಿಕಿತ್ಸೆ ಪಡೆದಿದ್ದಾರೆ.
ಡೆಂಗ್ಯೂ ಜ್ವರದ ಲಕ್ಷಣಗಳು-
ಗಾಢ ಸುಡು ಜ್ವರ, ತಲೆಶೂಲೆ ಹಾಗೂ ಮೈಕೈ ನೋವು. ದಿನಗಟ್ಟಲೆ ಈ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಹತ್ತಿರ ಹೋಗಿ ತೋರಿಸಿಕೊಳ್ಳಿ. 103- 104 ಡಿಗ್ರಿ ಸೆಲ್ಷಿಯಸ್‌ನಷ್ಟು ಜ್ವರ ಎರಡು ಮೂರು ದಿನ ಇದ್ದರೆ ಡೆಂಗ್ಯೂ ಜ್ವರ ಇದೆ ಎಂದು ಅನುಮಾನಿಸಲಾಗುತ್ತದೆ. ಸಾಕಷ್ಟು ಸುಸ್ತು ಮಾಡಿಸುವ ಈ ಜ್ವರ ಇದ್ದವರಿಗೆ ಗಾಯ ಬೇಗ ಮಾಗುವುದಿಲ್ಲ. ಯಾಕೆಂದರೆ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications