ವೆಬ್‌ಸೈಟ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಲಭ್ಯ
ಕರ್ನಾಟಕ ಸಿಇಟಿ ಫಲಿತಾಂಶ 2008
ಬೆಂಗಳೂರು : ಮೇ 30- 31ನೇ ತಾರೀಕು ನಡೆದ ವೃತ್ತಿಶಿಕ್ಷಣ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಜೂನ್ 23, ಸೋಮವಾರ ಮಧ್ಯಾಹ್ನ ಸಿಇಟಿ ಘಟಕದಲ್ಲಿ ಪ್ರಕಟವಾಗಲಿದೆ. ಅದಕ್ಕೂ ಮುಂಚೆಯೇ kar.nic.in/cet ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು.
ಉನ್ನತ ಶಿಕ್ಷಣ ಸಚಿವ ಡಾ। ಜಿ.ಪರಮೇಶ್ವರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸಿಇಟಿ ಪತ್ರಿಕೆಗಳ ಮೌಲ್ಯಮಾಪನದ ಕೆಲಸ ಅಂದುಕೊಂಡಿದ್ದಕ್ಕಿಂತ ಬಹಳ ಮುಂಚೆಯೇ ಪೂರೈಸಿದ್ದು, ಫಲಿತಾಂಶ ಬೇಗ ಪ್ರಕಟವಾಗಿದೆ. ಸೋಮವಾರ ಹೈಕೋರ್ಟಿನಲ್ಲಿ ವೃತ್ತಿ ಶಿಕ್ಷಣ ಕುರಿತ ಪ್ರಕರಣದ ವಿಚಾರಣೆ ನಡೆಯಲಿದ್ದು , ಉನ್ನತ ಶಿಕ್ಷಣಕ್ಕೆ ಹಾತೊರೆಯುತ್ತಿರುವ ಅಸಂಖ್ಯ ವಿದ್ಯಾರ್ಥಿಗಳು ಅದರ ಫಲಶೃತಿಗೆ ಎದುರು ನೋಡುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications