ದೊಡ್ಡವರಿಗಾಗಿ ಬಂದಿದೆ ಎಲ್‌ಐಸಿಯ ಪಿಂಚಣಿ ಯೋಜನೆ
ದೊಡ್ಡವರಿಗಾಗಿ ಬಂದಿದೆ ಎಲ್‌ಐಸಿಯ ಪಿಂಚಣಿ ಯೋಜನೆ
ಒಂದೇ ಬಾರಿ ಪ್ರೀಮಿಯಂ ಕಟ್ಟಿ, ವಾರ್ಷಿಕ 9% ಲಾಭ ಪಡೆಯಿರಿ
ಪ್ರೀಮಿಯಂದಾರರ ವಯಸ್ಸು 55- 79 ವರ್ಷ ಆಗಿರಬೇಕು. ಒಂದೇ ಬಾರಿಗೆ ಕನಿಷ್ಠ 33,335 ರುಪಾಯಿ, ಗರಿಷ್ಠ 2,77,490 ರುಪಾಯಿ ಹಣವನ್ನು ಪ್ರೀಮಿಯಂ ರೂಪದಲ್ಲಿ ಕಟ್ಟಬೇಕು. ಅದಕ್ಕೆ ವರ್ಷಕ್ಕೆ 9 ಪ್ರತಿಶತ ಬಡ್ಡಿಯಂತೆ ಹಣವನ್ನು ನೀಡಲಾಗುತ್ತದೆ. ಈ ಹಣವನ್ನು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಯಾವಾಗ ಬೇಕಾದರೂ ಪಡೆಯಬಹುದು.
ಎಲ್‌ಐಸಿಯ ವಿಭಾಗೀಯ ಮ್ಯಾನೇಜರ್‌ಗಳಾದ ಕುನ್ನೆಲ್ ಪ್ರೇಮ್ ಮತ್ತು ಡಿ.ಬೊಮ್ಮಯ್ಯ ಸೋಮವಾರ (ಜೂ.16) ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಪ್ರೀಮಿಯಂದಾರರು 2 ಲಕ್ಷ ರುಪಾಯಿಯನ್ನು ಇಟ್ಟಲ್ಲಿ, ವಾರ್ಷಿಕ 18 ಸಾವಿರ ರುಪಾಯಿ ಪಿಂಚಣಿ ದೊರೆಯಲಿದೆ. ಒಂದು ಕುಟುಂಬದ ಒಬ್ಬರು ಮಾತ್ರ ವಿಮಾದ ಪ್ರೀಮಿಯಂದಾರರಾಗುವ ಅವಕಾಶವಿದೆ. ವಯಸ್ಸಿನ ದಾಖಲೆ ಹೊರತುಪಡಿಸಿ ಮತ್ತೇನೂ ವಿವರಗಳು ಬೇಕಾಗಿಲ್ಲ. ಪ್ರೀಮಿಯಂ ಅನ್ನು ಚೆಕ್ಕು, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕರ್ಸ್ ಚೆಕ್ ಮೂಲಕ ಎಲ್‌ಐಸಿಯ ಆಯಾ ಶಾಖೆಗೆ ಕಟ್ಟಬೇಕು.
ವಿಮಾದಾರ ಮೃತಪಟ್ಟರೆ, ಪ್ರೀಮಿಯಂ ಮೊಬಲಗನ್ನು ಬಡ್ಡಿ ಸಮೇತ ನಾಮಿನಿದಾರರಿಗೆ ಕೊಡಲಾಗುತ್ತದೆ. ವಿಮೆ ಮಾಡಿಸುವ ವ್ಯಕ್ತಿ ಬದುಕಿರುವವರೆಗೆ ಈ ಪಿಂಚಣಿ ಯೋಜನೆಯ ಲಾಭ ಪಡೆಯಬಹುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications