‘ಅಮೆರಿಕೆಯ ಎರವಲು ಸೇವೆ ನಿಷೇಧ ಮಸೂದೆ ರಾಜಕೀಯದಾಟ’
‘ಅಮೆರಿಕೆಯ ಎರವಲು ಸೇವೆ ನಿಷೇಧ ಮಸೂದೆ ರಾಜಕೀಯದಾಟ’
ಬೆಂಗಳೂರಲ್ಲಿ ನಾಸ್‌ಕಾಮ್ ಅಧ್ಯಕ್ಷ ಸೋಮ್ ಮಿತ್ತಲ್
‘ನಾಸ್‌ಕಾಮ್‌ನ ಭಾರತ ಐಟಿಇಎಸ್- ಬಿಪಿಒ ಕಾರ್ಯತಂತ್ರ ಸಮ್ಮಿತ್- 2003’ಯನ್ನು ಜೂನ್ 12, ಶುಕ್ರವಾರ ಉದ್ಘಾಟಿಸಿ ಮಿತ್ತಲ್ ಮಾತಾಡುತ್ತಿದ್ದರು.
ಅಮೆರಿಕಾದಲ್ಲಿನ ಮಸುಕು ಆರ್ಥಿಕ ಕ್ಷೇತ್ರ ಇಂಥ ಮಸೂದೆಗಳನ್ನು ತರಲು ಪೂರಕವಾಗಿದೆ. ಜತೆಗೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಶಕ್ತಿಗಳು ಹೀಗೆಲ್ಲಾ ವರ್ತಿಸುತ್ತಿವೆ ಎಂದ ಮಿತ್ತಲ್, ಇದರಿಂದ ಭಾರತೀಯ ಕಂಪನಿಗಳಿಗೆ ಏನೇನೂ ತೊಂದರೆಯಾಗುವುದಿಲ್ಲ ಎಂದು ಭರವಸೆ ಕೊಟ್ಟರು.
ನ್ಯೂಜೆರ್ಸಿಯ ಮಸೂದೆಯಲ್ಲಿ ತಿದ್ದುಪಡಿಗಳಾಗಲಿವೆ. ಮೇರಿಲ್ಯಾಂಡ್ ಮತ್ತು ವಾಷಿಂಗ್ಟನ್‌ನ ಮಸೂದೆಗಳು ಜಾರಿಗೆ ಬರುವುದೇ ಅನುಮಾನ. ವಿದೇಶಗಳ ಎರವಲು ಸೇವೆಯನ್ನು ಪಡೆಯದೆ ಅನೇಕ ಉದ್ದಿಮೆಗಳು ಸೊರಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಒಂದು ಕಾಲದಲ್ಲಿ ತೆವಳುತ್ತಿದ್ದ ಅಮೆರಿಕಾದ ಮೋಟಾರು ಉದ್ದಿಮೆ ಹಾಗೂ ಉಕ್ಕು ಕೈಗಾರಿಕೆ ಎರವಲು ಸೇವೆ ಪಡೆದ ನಂತರ ಬಲಾಢ್ಯವಾದವು. ಅಮೆರಿಕಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮಸೂದೆಗಳು ಅಷ್ಟು ಸುಲಭವಾಗಿ ಜಾರಿಗೆ ಬರಲಾರವು ಎಂದರು.
ಭಾರತೀಯ ಐಟಿ ಕಂಪನಿಗಳಿಗೆ ಅಮೆರಿಕೆಯ ನಡೆಗಳಿಂದ ದೊಡ್ಡ ಮಟ್ಟದ ತೊಂದರೆಯಿಲ್ಲ. ಹಾಗಂತ ನಾವು ತಣ್ಣಗೆ ಮಲಗಲೂ ಕೂಡದು. ಸದ್ಯಕ್ಕೆ ಭದ್ರತೆಯ ಕಾರಣ ನಿಚ್ಚಳವಾಗಿರುವ ವೀಸಾ ನಿಯಮಾವಳಿಗಳನ್ನು ಎಲ್ಲರೂ ಸಮಾಧಾನದಿಂದ ಪಾಲಿಸಬೇಕು ಎಂದು ಕರೆ ಕೊಟ್ಟರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications