ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿಯಾಗಲು ಹೊರಟು ಕರೆವೆಣ್ಣಾದ ಮಾಜಿ ಮಿಸ್‌ ಬೆಂಗಳೂರು

By Staff
|
Google Oneindia Kannada News

ನಟಿಯಾಗಲು ಹೊರಟು ಕರೆವೆಣ್ಣಾದ ಮಾಜಿ ಮಿಸ್‌ ಬೆಂಗಳೂರು
ಕರೆವೆಣ್ಣಾದ ಮಾಜಿ ಮಿಸ್‌ ಬೆಂಗಳೂರು ಈಗ ಪೊಲೀಸರ ಅತಿಥಿ

ನವ ದೆಹಲಿ : 1999ರಲ್ಲಿ ಮಿಸ್‌ ಬೆಂಗಳೂರಾಗಿದ್ದ ಋತು (ಇದು ನಿಜ ಹೆಸರಲ್ಲ) ಎಂಬ 21ರ ಹರೆಯದ ಯುವತಿ ವೇಶ್ಯಾವಾಟಿಕೆ ನಡೆಸುತ್ತಿದ್ದಳೆಂದು ಇಲ್ಲಿನ ಪೊಲೀಸರು ಗುರುವಾರ (ಜೂನ್‌ 11) ಬಂಧಿಸಿದ್ದಾರೆ.

ಫ್ಯಾಷನ್‌ ಲೋಕದ ಕೆಲವು ಹುಡುಗಿಯರು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿಯ ಬೆನ್ನು ಹತ್ತಿದ ದೆಹಲಿ ಅಪರಾಧ ವಿಭಾಗದ ಪೊಲೀಸರ ಕೈಗೆ ಋತು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಳು ಎಂದು ಪೊಲೀಸ್‌ ಉಪ ಆಯುಕ್ತ ದೀಪೇಂದ್ರ ಪಾಠಕ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ಮಾಡೆಲ್‌ ಆಗಿರುವ ಬೆಂಗಳೂರಿನ ಹುಡುಗಿ ತನ್ನನ್ನು ಮತ್ತು ಇನ್ನೊಬ್ಬಳನ್ನು ಬೆಂಗಳೂರಿನ ಲತಾ ಎಂಬಾಕೆ ಇಲ್ಲಿಗೆ ಕಳಿಸಿದರು ಎಂದು ವಿಚಾರಣೆಯ ವೇಳೆ ತಿಳಿಸಿದ್ದಾಳೆ.

ಮಧ್ಯಮ ವರ್ಗದ ಕುಟುಂಬದವಳಾದ ಋತುಗೆ ನಟಿಯಾಗಬೇಕೆಂಬ ಅದಮ್ಯ ಬಯಕೆ. ಮಾಡೆಲ್‌ ಲೋಕಕ್ಕೆ ಕಾಲಿಡಬೇಕಾದರೆ ಸಾಕಷ್ಟು ದುಡ್ಡು ಚೆಲ್ಲಲೇಬೇಕು. ಅದನ್ನು ಭರಿಸುವ ತಾಕತ್ತು ಆಕೆಯ ಮನೆಯವರಿಗಿರಲಿಲ್ಲ. ಹೀಗಾಗಿ ದುಡ್ಡು ಮಾಡೋಕೆ ಈ ದಂಧೆಯನ್ನು ಎರಡು ವರ್ಷಗಳಿಂದ ಅನಿವಾರ್ಯವಾಗಿ ಶುರು ಮಾಡಿದ್ದಾಗಿ ಪೊಲೀಸರಿಗೆ ಋತು ಹೇಳಿದ್ದಾಳೆ. ದೆಹಲಿಯಲ್ಲಿ ನಾಯಕಿಯಾಗೋಕೆ ಬೇಕಾದ ಪ್ರೊಫೈಲ್‌ ಫೋಟೋಗಳನ್ನು ತೆಗೆಸಿಕೊಳ್ಳುವ ಕಾರ್ಯಕ್ರಮವನ್ನೂ ಋತು ಹಾಕಿಕೊಂಡಿದ್ದಳು.

ಋತು ಮೊಬೈಲ್‌ ನಂಬರನ್ನು ಪೊಲೀಸರು ಪತ್ತೆ ಮಾಡಿದರು. ಒಬ್ಬಾತನನ್ನು ಗಿರಾಕಿಯಂತೆ ಮಾತಾಡಿ, ಆಕೆಯನ್ನು ಹಿಡಿಯಲು ನೇಮಿಸಿಕೊಂಡರು. ಗಿರಾಕಿಯಂತೆ ನಟಿಸಿದವನನ್ನು 15 ಸಾವಿರ ರುಪಾಯಿ ಕೊಡಬೇಕೆಂದು ಋತು ಕೇಳಿದಳು. ಪಂಚತಾರಾ ಹೊಟೇಲೊಂದಕ್ಕೆ ಬುಲಾವು ಕೊಟ್ಟಳು. ಅಲ್ಲಿ ಆಕೆಗೆ 2 ಸಾವಿರ ರುಪಾಯಿ ಅಡ್ವಾನ್ಸ್‌ ಕೊಟ್ಟು, ರೂಮಿಗೆ ಹೋದ ನಂತರ ಹಿಡಿಯಲಾಯಿತು.

ಫ್ಯಾಷನ್‌ ಲೋಕದ ಇಂತಹ ಹುಡುಗಿಯರನ್ನು ಮುಂದೆ ಬಿಟ್ಟು ದಂಧೆ ನಡೆಸುತ್ತಿರುವ ಬೆಂಗಳೂರಿನ ಲತಾ ಯಾರು ಅಂತ ದೆಹಲಿ ಪೊಲೀಸರು ತಲಾಷಿಗೆ ಶುರುವಿಟ್ಟುಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X