ಬಿಜಾಪುರೆ ಹಾಗೂ ಜಯರಾಮನ್‌ಗೆ ಟಿ.ಚೌಡಯ್ಯ ಪ್ರಶಸ್ತಿ
ಬಿಜಾಪುರೆ ಹಾಗೂ ಜಯರಾಮನ್‌ಗೆ ಟಿ.ಚೌಡಯ್ಯ ಪ್ರಶಸ್ತಿ
ಸಂಗೀತ ಆರಾಧಕರಿಗೆ ಸಂದ ರಾಜ್ಯ ಸರ್ಕಾರದ ಪ್ರತಿಷ್ಠಿತ ಮನ್ನಣೆ
ಬಿಜಾಪುರೆ ಅವರು 2001ನೇ ಸಾಲಿನ ಪ್ರಶಸ್ತಿ ಹಾಗೂ ಜಯರಾಮನ್ ಅವರು 2002ನೇ ಇಸವಿಯ ಟಿ.ಚೌಡಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ. ವಿದ್ವಾನ್ ಬಿ.ಶಂಕರರಾವ್ ಅವರ ನೇತೃತ್ವದ ಆಯ್ಕೆ ಮಂಡಳಿ ಪ್ರತಿಷ್ಠಿತ ಪ್ರಶಸ್ತಿಗೆ ಈ ಇಬ್ಬರ ಹೆಸರು ಸೂಚಿಸಿದೆ.
1.5 ಲಕ್ಷ ರುಪಾಯಿ ನಗದು, ತಾಮ್ರ ಫಲಕ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ. ವಾದ್ಯ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಕಲಾವಿದರಿಗೆ ಚೌಡಯ್ಯ ಪ್ರಶಸ್ತಿ ನೀಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications