ಬಿಎಸ್ಸೆನ್ನೆಲ್ ಗಿರಾಕಿಗಳಿಗೆ ಖಾತೆ ಇಲ್ಲದೆ ಇಂಟರ್ನೆಟ್
ಬಿಎಸ್ಸೆನ್ನೆಲ್ ಗಿರಾಕಿಗಳಿಗೆ ಖಾತೆ ಇಲ್ಲದೆ ಇಂಟರ್ನೆಟ್
ಪ್ರತಿ ನಿಮಿಷಕ್ಕೆ ಕರೆಯ ದರದ ಜೊತೆಗೆ 10 ಪೈಸೆ ನೆಟ್ ದರ
ಬೆಂಗಳೂರು ಟೆಲಿಕಾಂ ಪ್ರಧಾನ ಮುಖ್ಯ ವ್ಯವಸ್ಥಾಪಕ ಬಿ.ಆರ್.ಬಾಳಿಗಾ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಪ್ರತ್ಯೇಕ ಖಾತೆ ಇಲ್ಲದೆಯೇ ಜುಲೈ ತಿಂಗಳಿಂದ ಬೆಂಗಳೂರಿನ ಗ್ರಾಹಕರು ಇಂಟರ್ನೆಟ್ ಬ್ರೌಸ್ ಮಾಡಬಹುದು. ಸ್ಥಳೀಯ ಕರೆಯಾಂದಕ್ಕೆ ನೀಡುವ 1.20 ರುಪಾಯಿ ಜತೆಗೆ ಪ್ರತಿ ನಿಮಿಷಕ್ಕೆ 10 ಪೈಸೆ ನೆಟ್ ದರವನ್ನು ಕೊಡಬೇಕಾಗುತ್ತದಷ್ಟೆ.
ಈ ರೀತಿ ಇಂಟರ್ನೆಟ್ ಸಂಪರ್ಕ ಪಡೆಯಲು ಹೊಸದಾಗಿ ಅರ್ಜಿ ಹಾಕುವ ಅಗತ್ಯವಿಲ್ಲ. ನೆಟ್ ದರವನ್ನೂ ಫೋನ್ ಬಿಲ್ಲಿನಲ್ಲೇ ಸೇರಿಸಿ ಟೆಲಿಕಾಂ ಇಲಾಖೆ ನಿಮ್ಮ ಮನೆಗೆ ತಲುಪಿಸುತ್ತದೆ. ಅಧಿಕ ಬೇಡಿಕೆಯ ಅವಧಿ ಹೊರತು ಪಡಿಸಿ, ಬೇರೆ ಅವಧಿಯಲ್ಲಿ ಪ್ರತಿ ಗಂಟೆಗೆ 7.20 ರುಪಾಯಿಯಂತೆ ಬಿಲ್ಲು ಬರಲಿದೆ. ರಾಷ್ಟ್ರೀಯ ರಜಾ ದಿನಗಳು ಮತ್ತು ಭಾನುವಾರಗಳಲ್ಲಿ ಕರೆಗಳ ದರಗಳ ವಿನಾಯಿತಿ ಅನ್ವಯವಾಗಲಿದೆ ಎಂದು ಬಾಳಿಗಾ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ












Click it and Unblock the Notifications