ಸೆ. 26ರಿಂದ ಶ್ರೀರಂಗರ ಜನ್ಮ ಶತಮಾನೋತ್ಸವ

ಬೆಂಗಳೂರು: ರಂಗ ಕರ್ಮಿ, ನಾಟಕಕಾರ ಶ್ರೀರಂಗ ಅವರ ಜನ್ಮ ಶತಮಾನೋತ್ಸವವನ್ನು ಸೆಪ್ಟೆಂಬರ್‌ 26ರಿಂದ ಆಚರಿಸಲಾಗುವುದು.

ಇದಕ್ಕಾಗಿ ಶ್ರೀರಂಗ ಶತಮಾನೋತ್ಸವ ಸಮಿತಿ ರಚಿಸಲಾಗಿದ್ದು ಸಮಿತಿ ಕಾರ್ಯಾಧ್ಯಕ್ಷ ಡಾ. ಕೆ. ಮರುಳಸಿದ್ಧಪ್ಪ ಈ ವಿಷಯವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶತಮಾನೋತ್ಸವದ ಅಂಗವಾಗಿ ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಶ್ರೀರಂಗರ ನಾಟಕದ ಕುರಿತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯು ಶ್ರೀರಂಗರ ನಾಟಕಗಳ ಇಂಗ್ಲಿಷ್‌ ಅನುವಾದವನ್ನು ಪ್ರಕಟಿಸಲಿದೆ. ಅಲ್ಲದೆ ಶತಮಾನೋತ್ಸವದ ಸಲುವಾಗಿ ಛಾಯಾಚಿತ್ರ ಪ್ರದರ್ಶನ, ನಾಟಕ ಸ್ಪರ್ಧೆಗಳನ್ನು ನಡೆಸಲಾಗುವುದು, ಈ ವರ್ಷವಿಡೀ ನಡೆಸುವ ಕಾರ್ಯಕ್ರಮಗಳ ವಿವರವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಮರುಳಸಿದ್ಧಪ್ಪ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+