ಯುದ್ಧ ವರದಿಯಲ್ಲಿ ಸಂಗೀತ, ಶಿವ ಶಿವಾ- ಯುಆರ್‌ಎ

ಬೆಂಗಳೂರು : ಟೀವಿ ಚಾನೆಲ್‌ಗಳು ಅಮೆರಿಕ- ಇರಾಕ್‌ ಯುದ್ಧದ ವರದಿಗಳನ್ನು ಬಿತ್ತರಿಸುವಾಗ ಹಾಕುವ ಸಂಗೀತ ಕೇಳಿದರೆ ಮೈಯೆಲ್ಲಾ ಉರಿಯುತ್ತೆ. ಯುದ್ಧದಂಥಾ ಗಂಭೀರ ವರದಿಗೆ ಹೊಂದದಂಥಾ ಸಂಗೀತ ಹಾಕಿ, ಅದರ ತೀವ್ರತೆಯನ್ನು ಮಸುಕಾಗಿಸಿ ತೋರಿಸುವ ಪ್ರವೃತ್ತಿಯನ್ನು ಖಂಡಿಸುತ್ತೇನೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

‘ಸಿಎನ್‌ಎನ್‌ ಚಾನೆಲ್ಲಿಗೆ ಹೋಲಿಸಿದರೆ ಬಿಬಿಸಿಗೆ ಕೊಂಚ ಆತ್ಮ ಗೌರವ ಹೆಚ್ಚು. ಹೀಗಾಗಿ ಅದಕ್ಕೆ ಸಾಮಾಜಿಕ ಬದ್ಧತೆ ಸ್ವಲ್ಪವಾದರೂ ಇದೆ. ಟೀವಿಯಲ್ಲಿ ತೋರಿಸುವ ಯುದ್ಧದ ಚಿತ್ರಗಳನ್ನು ಮನೆ ಮಂದಿಯೆಲ್ಲಾ ನೋಡುತ್ತಾರೆ. ಹೆಂಗಸರು, ಮಕ್ಕಳು, ನಮ್ಮಂಥ ವಯಸ್ಸಾದವರು- ಎಲ್ಲಾ ಏನಾಯಿತಪ್ಪಾ ಅಂತ ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತೇವೆ. ಯುದ್ಧದ ಪರಿಣಾಮವನ್ನು ಡಿಸೆನ್ಸೇಷನಲೈಸ್‌ ಮಾಡಿ, ತಂತ್ರವನ್ನು ಸೆನ್ಸೇಷನಲೈಸ್‌ ಮಾಡುವುದು ಯಾರ್ಯಾರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ಇಂಚಿಂಚೂ ಗಮನಿಸಿದ್ದೇನೆ. ಯುದ್ಧದ ವರದಿಗಳೂ ಯಾವುದೋ ಚಲನಚಿತ್ರದ ಥರ ರೋಚಕವಾಗಿ, ವಾಸ್ತವ ಮುಚ್ಚಿ ಹೋದರೆ ಅಂತಾ ವರದಿಗಳಿಗೆ ಅರ್ಥವೇ ಇರೋದಿಲ್ಲ...’

ಆಂಗ್ಲ ಪತ್ರಿಕೆಯಾಂದರ ಅಭಿಪ್ರಾಯ ಸಂಗ್ರಹಣಾ ವರದಿಯಲ್ಲಿ ಅನಂತ ಕುಮಾರ್‌ ಕಿಡಿ ಕಾರಿರುವುದು ಹೀಗೆ. ಅಮೆರಿಕೆಯ ವಸ್ತುಗಳನ್ನು ನಿಷೇಧಿಸಿ ಶುರುಮಾಡಿರುವ ಚಳವಳಿಯ ನೇತಾರರೂ ಆಗಿರುವ ಅನಂತ ಮೂರ್ತಿ ನಿತ್ಯವೂ ತಪ್ಪದೆ ಯುದ್ಧದ ಇಂಚಿಂಚೂ ಮಾಹಿತಿಯನ್ನು ಮೊಗೆದುಕೊಳ್ಳುತ್ತಿದ್ದಾರೆ.

ಅನಂತ ಮೂರ್ತಿ ಅಭಿಪ್ರಾಯಕ್ಕೆ ನೀವೇನಂತೀರಿ?

(ಇನ್ಫೋ ವಾರ್ತೆ)

ಅನಂತ ವಿಚಾರಧಾರೆ
ಏನಿದು ಮೂರ್ತಿಗಳೇ..ಯುದ್ಧಕ್ಕೆ ಇಂಗ್ಲೀಷ್‌ ಕಾರಣವೇ ?
ಅಮೆರಿಕ ವಿರೋಧಿ ಆಂದೋಲನಕ್ಕೆ ಅನಂತಮೂರ್ತಿ ಜೈ !
ವಿಶ್ವದ ದೊಡ್ಡ ಸುಳ್ಳಾಡುವ ಭಾಷೆ ಇಂಗ್ಲಿಷ್‌-ಅನಂತಮೂರ್ತಿ

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+