ಸಾಗರ್‌ ಅಪೋಲೊದಲ್ಲಿ ಹೆಂಡತಿ ಹೆರಿಗೆಯ ದರ್ಶನ

ಬೆಂಗಳೂರು : ಹೆಂಡತಿಯ ಹೆರಿಗೆ ಸಮಯದ ನೋವನ್ನು ಗಂಡ ಆಸ್ಪತ್ರೆಯ ಹೊರಗೇ ನಿಂತು ಕೇಳಿಸಿಕೊಳ್ಳುತ್ತಾ, ಹಳಹಳಿಸುವ ಕಾಲಕ್ಕೀಗ ವಿದಾಯ. ನಗರದ ಸಾಗರ್‌ ಅಪೋಲೊ ಆಸ್ಪತ್ರೆಯಲ್ಲಿ ಇನ್ನು ಮುಂದೆ ಹೆಂಡತಿ ಮಗು ಹೆರುವುದನ್ನು ಗಂಡ ಪ್ರತ್ಯಕ್ಷ ನೋಡಬಹುದು.

ದೇಶದಲ್ಲೇ ಇಂಥಾ ಸವಲತ್ತು ಕಲ್ಪಿಸುತ್ತಿರುವ ಮೊದಲ ಆಸ್ಪತ್ರೆ ಸಾಗರ್‌ ಅಪೋಲೊ. ಹೆರಿಗೆಯ ಸಮಯದಲ್ಲಿ ತಾಯಿಗೆ ವಿಶೇಷ ಸುರಕ್ಷತೆ ಕೊಡುವಂಥಾ ಉಪಕರಣಗಳು ಈ ಆಸ್ಪತ್ರೆಯಲ್ಲಿವೆ. ಬ್ರಿಟನ್‌ನಿಂದ ತರಿಸಲಾಗಿರುವ ವಿಶೇಷ ಹಾಸಿಗೆಯನ್ನು ಸುಲಭವಾಗಿ ಹೆರಿಗೆ ಹಾಸಿಗೆಯನ್ನಾಗಿ ಪರಿವರ್ತಿಸಬಹುದು. ಈ ವಿಶೇಷ ಹಾಸಿಗೆಯ ಬೆಲೆ ಬರೋಬ್ಬರಿ 12 ಸಾವಿರ ಅಮೆರಿಕನ್‌ ಡಾಲರ್‌.

ಆಸ್ಪತ್ರೆಯ ಉಪಾಧ್ಯಕ್ಷ ಮದನ್‌ ಗಾಯಕ್‌ವಾಡ್‌ ಸುದ್ದಿಗೋಷ್ಠಿಯಲ್ಲಿ ಈ ಹೊಸ ಸೌಲಭ್ಯದ ವಿವರಗಳನ್ನು ಕೊಟ್ಟರು. ಹೊಸ ವ್ಯವಸ್ಥೆಯಿಂದಾಗಿ ವಿಶೇಷ ವಾರ್ಡ್‌ನಲ್ಲಿ ಹೆರಿಗೆ ನಡೆಸಬಹುದು. ಹೆರಿಗೆ ನಂತರ ಬೇರೆ ವಾರ್ಡ್‌ಗೆ ವರ್ಗಾಯಿಸುವ ಜಂಜಾಟ ಇರುವುದಿಲ್ಲ. ಲೇಬರ್‌ ಬೆಟ್‌, ಸ್ನಾನದ ಮನೆ, ಹಾಸಿಗೆ ಹಾಗೂ ಹೊದಿಕೆಗಳನ್ನು ಬೆಚ್ಚಗಿಡುವ ಉಪಕರಣ, ಚೆಂದದ ಪೀಠೋಪಕರಣ, ಫೋನು, ಸ್ಟೀರಿಯೋ, ಪುಟ್ಟ ರೆಫ್ರಿಜರೇಟರ್‌, ಇಂಟರ್ನೆಟ್‌ ಸಂಪರ್ಕ ಇರುವ ಕಂಪ್ಯೂಟರ್‌- ಇವೆಲ್ಲ ಸಲವತ್ತುಗಳು ವಿಶೇಷ ವಾರ್ಡ್‌ನಲ್ಲಿರುತ್ತದೆ. ಅಂದರೆ, ಮನೆಯಂಥದೇ ವಾತಾವರಣದಲ್ಲಿ ಹೆರಿಗೆ. ಅದನ್ನು ಪ್ರತ್ಯಕ್ಷ ನೋಡುವ ಅವಕಾಶ ಗಂಡನಿಗೆ.

ಹೆರಿಗೆ ಸಂದರ್ಭದಲ್ಲಿ ಹೆಂಗಸಿಗೆ ಪ್ರಿಯವಾದವರು ಹತ್ತಿರದಲ್ಲಿದ್ದರೆ ಪ್ರಸವ ವೇದನೆ ಕಡಿಮೆಯಾಗುತ್ತದೆ ಹಾಗೂ ಹೆರಿಗೆ ಸಲೀಸಾಗಿ ಆಗುತ್ತದೆ ಎಂಬ ಹಳೆಯ ಮಾತನ್ನು ಈ ರೀತಿ ಹೈಟೆಕ್‌ ರೂಪ ಕೊಟ್ಟು ಆಸ್ಪತ್ರೆ ಸಾಕಾರ ಮಾಡುತ್ತಿದೆ.

ಈ ವಾರ್ಡ್‌ನ 3 ದಿನಗಳ ಕಾಲದ ಪ್ಯಾಕೇಜ್‌ಗೆ 24 ಸಾವಿರ ರುಪಾಯಿ ಶುಲ್ಕವನ್ನು ಆಸ್ಪತ್ರೆ ನಿಗದಿಪಡಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+