ಇದು ಮೊದಲು ; ಕಂಪ್ಯೂಟರ್ ಕಂಪ್ಯೂಟರ್ ಕಂಪ್ಯೂಟರ್
ಬೆಂಗಳೂರು : ಬೆಂಗಳೂರು ಐಟಿ.ಕಾಂ ಮೇಳ, ಜೈವಿಕ ತಂತ್ರಜ್ಞಾನ ಮೇಳ, ಮೈಸೂರು ಐಟಿ.ಕಾಂ ಮೇಳ- ಇದೆಲ್ಲಾ ವಾರ್ಷಿಕ ಸಂಪ್ರದಾಯವಾಯಿತು. ಈ ಮೇಳಗಳ ಸಾಲಿಗೆ ಈಗ ಹೊಸ ಸೇರ್ಪಡೆ- ಕಂಪ್ಯೂಟರ್ ಹಾಗೂ ಕಂಪ್ಯೂಟರ್ ಸಂಬಂಧಿ ವಸ್ತುಗಳ ಮೇಳ.
ಪರ್ಸನಲ್ ಕಂಪ್ಯೂಟರ್, ಕಂಪ್ಯೂಟರ್ ಹಾರ್ಡ್‌ವೇರ್ ಹಾಗೂ ಕಂಪ್ಯೂಟರ್ ಸಂಬಂಧಿ ವಸ್ತುಗಳ ಪ್ರದರ್ಶನ ಮೇ 8 ರಿಂದ ಬೆಂಗಳೂರಿನಲ್ಲಿ ಜರುಗಲಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ಧವಾದ ಬೆಂಗಳೂರಿನಲ್ಲಿ ಇಂಥದೊಂದು ಪ್ರದರ್ಶನ ನಡೆಯುತ್ತಿರುವುದು ಇದೇ ಮೊದಲು.
ಕಂಪ್ಯೂಟರ್ ಹಾಗೂ ಕಂಪ್ಯೂಟರ್ ವಸ್ತುಗಳ ಪ್ರದರ್ಶನ ವೇದಿಕೆಯಾದ ಈ ಮೇಳದಲ್ಲಿ - ಬಹುರಾಷ್ಟ್ರೀಯ ಕಂಪನಿಗಳು, ಭಾರತೀಯ ಹಾಗೂ ವಿದೇಶಿ ಕಂಪನಿಗಳು ಸೇರಿದಂತೆ 120 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ಮೇಳದ ಆಯೋಜಕ ಕಂಪನಿಯಾದ ಯುನಿಕ್ ಎಕ್ಸ್‌ಪೊಸಿಷನ್ಸ್ ಸುದ್ದಿ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕುಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಕೂಡ ಮೇಳದಲ್ಲಿ ಭಾಗವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications