ಗಾಂಧೀಜಿಗೆ ಏಟು ! ಮೇ ಸಂಚಿಕೆಯಲ್ಲಿ ‘ಮ್ಯಾಕ್ಸಿಂ’ ಉತ್ತರ

ವಾಷಿಂಗ್ಟನ್‌ : ಮಹಾತ್ಮ ಗಾಂಧೀಜಿಗೆ ಜಟ್ಟಿಯಿಂದ ಹೊಡೆಸುವ ಚಿತ್ರ ಪ್ರಕಟಿಸಿ ಅನೇಕ ಅಮೆರಿಕನ್‌ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿರುವ ಮ್ಯಾಕ್ಸಿಂ ನಿಯತಕಾಲಿಕ ತನ್ನ ಮೇ ತಿಂಗಳ ಸಂಚಿಕೆಯಲ್ಲಿ ಎದ್ದಿರುವ ತಗಾದೆಗೆ ಉತ್ತರ ಕೊಡುವುದಾಗಿ ಹೇಳಿದೆ.

ಕೆಲವು ಜನ ಮಾಡುತ್ತಿರುವ ಟೀಕಾ ಪ್ರಹಾರಕ್ಕೆ ಈಗಲೇ ಉತ್ತರ ಕೊಡುವುದು ಸಮಂಜಸವಲ್ಲ. ಪತ್ರಿಕೆಯ ಬೇರೆ ಕೆಲಸಗಳು ಬಾಕಿ ಇವೆ. ಏನೆಲ್ಲಾ ಟೀಕೆಗಳು ಬಂದಿವೆಯೋ ಅವನ್ನೆಲ್ಲಾ ಮುಂದಿಟ್ಟುಕೊಂಡು ಕೂತಿದ್ದೇವೆ. ಅದಕ್ಕೆ ಏನು ಉತ್ತರ ಕೊಡಬೇಕು ಎಂಬ ಸಮಾಲೋಚನೆಯನ್ನೂ ನಡೆಸಿದ್ದೇವೆ. ಮೇ ತಿಂಗಳ ಸಂಚಿಕೆಯೇ ತಗಾದೆಗಳಿಗೆ ಉತ್ತರ ಕೊಡಲಿದೆ ಎಂದು ಪತ್ರಿಕೆಯ ವಕ್ತಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾವು ಕ್ಷಮೆ ಕೇಳುತ್ತೇವೆ ಅಂತ ಅಪ್ಪಿ ತಪ್ಪಿ ಕೂಡ ವಕ್ತಾರ ಹೇಳಿಲ್ಲ. ಆದರೂ, ಅವರು ಕೊಡುವ ಉತ್ತರಕ್ಕೆ ಕಾಯುತ್ತೇವೆ. ಆಗಲೂ ಗಾಂಧೀಜಿಗೆ ಮಾಡಿರುವ ಅವಮಾನಕ್ಕೆ ತಲೆ ಬಾಗಿಸಿ ಉತ್ತರ ಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಮೆಂಫಿಸ್‌ನ ಎಂ.ಕೆ.ಗಾಂಧಿ ಇನ್ಸ್‌ಟಿಟ್ಯೂಟ್‌ನ ಆಡಳಿತಾಧಿಕಾರಿ ಮೈಕೆಲ್‌ ನೈಫ್‌ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವು ಸಂಸ್ಥೆಗಳು ಸಹಿಷ್ಣು ಶಿಕ್ಷಣಕ್ಕೆ ದತ್ತಿ ಹಣ ಕೊಡುವ ಮೂಲಕ ತಾನು ಮಾಡಿರುವ ತಪ್ಪಿಗೆ ಮ್ಯಾಕ್ಸಿಂ ಪತ್ರಿಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿದಿವೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+