ಕೃಷ್ಣ ರಾಜೀನಾಮೆಗೆ ವೀರಶೈವ ನಾಯಕರ ಒತ್ತಾಯ
ಬೆಂಗಳೂರು: ಮಾಜಿ ಸಚಿವ ನಾಗಪ್ಪ ಅವರ ದಾರುಣ ಸಾವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸರಕಾರ ರಾಜೀನಾಮೆ ನೀಡಬೇಕು ಎಂದು ವೀರಶೈವ ಸಮುದಾಯದ ನಾಯಕರು ಆಗ್ರಹಿಸಿದ್ದಾರೆ.
ಸುತ್ತೂರು ಮಠದ ನಗರ ಶಾಖೆಯ ಸದನದಲ್ಲಿ ಭಾನುವಾರ ರಾತ್ರಿ ಸಭೆ ಸೇರಿದ ನಾಗಪ್ಪ ಅವರ ಹಿತೈಷಿಗಳು ಹಾಗೂ ಬೆಂಬಲಿಗರಾದ ವೀರಶೈವ ನಾಯಕರು ಡಾ.ರಾಜ್ ಅವರನ್ನು ವೀರಪ್ಪನ್ ಸೆರೆಯಿಂದ ಬಿಡಿಸಿಕೊಂಡು ಬರಲು ತೋರಿಸಿದ ಕಾಳಜಿಯನ್ನು ನಾಗಪ್ಪ ಅಪಹರಣ ಪ್ರಕರಣದಲ್ಲಿ ಸರಕಾರ ತೋರಿಲ್ಲ ಎಂದು ದೂರಿದರು. ವೀರಶೈವ ನಾಯಕರ ಸಭೆಯ ನಂತರ ಮಾಜಿ ಡಿಜಿಪಿ (ಕಾರಾಗೃಹ)ರೇವಣಸಿದ್ಧಯ್ಯ ಸಭೆಯ ಆಗ್ರಹಗಳನ್ನು ಸುದ್ದಿಗಾರರಿಗೆ ತಿಳಿಸಿದರು.
ವೀರಪ್ಪನ್‌ನಿಂದ ಬಂದ ಆರನೇ ಕೆಸೆಟ್‌ನಲ್ಲಿ ನಾಗಪ್ಪ ಅವರ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಭಾನುವಾರ ಸಂಜೆಯವರೆಗೂ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ನಾಗಪ್ಪ ಅವರ ಕುಟುಂಬಕ್ಕೆ ಪೊಳ್ಳು ಭರವಸೆ ನೀಡುತ್ತಲೇ ಇತ್ತು. ಕೊನೆಗೂ ನಾಗಪ್ಪ ಅವರ ಸಾವನ್ನು ಹಿರಿಯ ಪೊಲೀಸ್ ಅಧಿಕಾರಿಯಾಬ್ಬರು ಕುಟುಂಬಕ್ಕೆ ತಿಳಿಸಿದರು. ಪರಿಸ್ಥಿತಿ ಕೈ ಮೀರುತ್ತಿರುವಾಗಲೂ ಸರಕಾರ ಯಾವುದೇ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ನಾಗಪ್ಪ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರೇವಣ ಸಿದ್ಧಯ್ಯ ಹೇಳಿದರು.
ಕೃಷ್ಣ ಸರಕಾರ ರಾಜೀನಾಮೆಗೆ ಬಿಜೆಪಿ ಆಗ್ರಹ
ಈ ನಡುವೆ ನಾಗಪ್ಪ ಅವರ ದಾರುಣ ಅಂತ್ಯಕ್ಕೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸರಕಾರವೇ ಮುಖ್ಯ ಕಾರಣವಾಗಿದ್ದು ನೈತಿಕ ಜವಾಬ್ದಾರಿಯ ಮೇರೆಗೆ ಕೃಷ್ಣ ಸರಕಾರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷವಾದ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಬಿಜೆಪಿಯ ರಾಜ್ಯ ನಾಯಕ ಬಸವರಾಜ್ ಪಾಟೀಲ್ ಸೇಡಂ ಸೋಮವಾರ ಬೆಳಗ್ಗೆ ಕೃಷ್ಣ ಸರಕಾರದ ರಾಜೀನಾಮೆಗೆ ಪಟ್ಟು ಹಿಡಿದಿರುವುದಾಗಿ ಪಿಟಿಐ ವರದಿ ಮಾಡಿದೆ. ರಾಜ್ ಅವರನ್ನು ವೀರಪ್ಪನ್ ಸೆರೆಯಿಂದ ಬಿಡಿಸಿದ ತಕ್ಷಣವೇ ವೀರಪ್ಪನ್‌ನನ್ನು ಹಿಡಿಯಬೇಕಿತ್ತು. ಆದರೆ ಕೃಷ್ಣ ಸರಕಾರ ಆ ಬಗ್ಗೆ ಹೆಚ್ಚಿನ ಗಮನವನ್ನೇ ಹರಿಸಲಿಲ್ಲ. ಸರಕಾರಕ್ಕೆ ನೈತಿಕತೆ ಎಂಬುದೇನಾದರೂ ಉಳಿದಿದ್ದರೆ ಈಗ ಆಗಿರುವ ಅನಾಹುತದ ಜವಾಬ್ದಾರಿಗಳನ್ನೂ ಹೊತ್ತು ರಾಜೀನಾಮೆ ನೀಡಲಿ ಎಂದು ಸೇಡಂ ಕಟುವಾಗಿ ಟೀಕಿಸಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications