ಬೆಂಗಳೂರು ಉಗ್ರರಿಗೂ ನಾಗಪ್ಪ ಹತ್ಯೆಗೂ ಸಂಬಂಧ?
ಬೆಂಗಳೂರು : ನಗರದ ಫ್ರೇಜರ್ ಟೌನ್‌ನಲ್ಲಿ ಇತ್ತೀಚೆಗೆ ಬಂಧಿತರಾದ ತಮಿಳು ಉಗ್ರರಿಗೂ, ನಾಗಪ್ಪನವರ ಹತ್ಯೆಗೂ ಏನಾದರೂ ಸಂಬಂಧವಿದೆಯಾ?
ವೀರಪ್ಪನ್ ಹೇಳಿರುವ ಮಾಹಿತಿಯ ಜಾಡು ಹಿಡಿದು ಹೊರಟರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುತ್ತದೆ. ಬಂಧಿತ ಉಗ್ರರಿಗೂ ವೀರಪ್ಪನ್‌ಗೂ ನಂಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ ಎನ್ನುತ್ತಿದೆ ಪೊಲೀಸ್ ಮೂಲ. ಫ್ರೇಜರ್ ಟೌನಿನ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡ ಮುತ್ತುರಾಜ್ ಎಂಬ ಉಗ್ರ ತಮಿಳುನಾಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅಲ್ಲಿನ ಎಸ್‌ಟಿಎಫ್ ಪಡೆಗೆ ವೀರಪ್ಪನ್ ನೆಲೆಯನ್ನು ತಿಳಿಸಿದ್ದಾನೆ ಎಂದು ಪೊಲೀಸ್ ವಲಯದಲ್ಲಿ ದಟ್ಟ ಸುದ್ದಿ ಹಬ್ಬಿದೆ.
ಯಾರೀ ಮುತ್ತುರಾಜ್? ಪೊಲೀಸರ ಪ್ರಕಾರ...
ಇವನೊಬ್ಬ ತಮಿಳು ಉಗ್ರ. ಶಸ್ತ್ರಾಸ್ತ್ರ ತಯಾರಿಕಾ ಜಾಲ ಹಾಗೂ ವೀರಪ್ಪನ್‌ಗೆ ಇವನು ಸೇತು. ವೀರಪ್ಪನ್ ಜೊತೆ ಕಾಡಿನಲ್ಲಿ ಹಾಗೂ ಉಗ್ರರ ಜೊತೆ ನಾಡಿನಲ್ಲಿ ಅಲೆಮಾರಿಯಾಗಿದ್ದ ಈತ, ರಾಜ್ಯೋತ್ಸವದ ದಿನ (ನ.1) ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರ ನಡೆಸಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. 1999ರಲ್ಲಿ ಮಾರಿಕುಪ್ಪಂನ ಫ್ಯಾಕ್ಟರಿಯಾಂದರ ಕಾವಲುಗಾರನಿಂದ ಕದ್ದೊಯ್ದ ಡಬಲ್ ಬ್ಯಾರಲ್ ಬಂದೂಕನ್ನು ಈತ ವೀರಪ್ಪನ್‌ಗೆ ತಲುಪಿಸಿದ್ದಾನೆ.
ಯಾರನ್ನಾದರೂ ಅಪಹರಿಸಲು ಹೋಗುವಾಗ ವೀರಪ್ಪನ್ ಜೊತೆಯಲ್ಲಿ ಮುತ್ತುರಾಜ್ ಇದ್ದೇ ಇರುತ್ತಾನೆ. ನಾಗಪ್ಪನವರನ್ನು ಅಪಹರಿಸಿದಾಗಲೂ ವೀರಪ್ಪನ್ ಜೊತೆಯಲ್ಲಿ ಮುತ್ತುರಾಜ್ ಇದ್ದ. ಈತ ತಮಿಳುನಾಡು ಪೊಲೀಸರಿಗೆ ಸಿಕ್ಕಿದ್ದೇ ವೀರಪ್ಪನ್‌ಗೆ ಹಿನ್ನಡೆಯಾಯಿತು.
ತಮಿಳುನಾಡು ಎಸ್‌ಟಿಎಫ್ ಈತನ ಬಾಯಿ ಬಿಡಿಸಿ, ವೀರಪ್ಪನ್ ನೆಲೆದಾಣವನ್ನು ಪತ್ತೆ ಮಾಡಿದ್ದಾರೆ. ನಂತರ ನಡೆದಿದೆ ಎನ್ನಲಾಗಿರುವ ದಾಳಿಯ ಕಾರಣ ನಾಗಪ್ಪ ಮೃತಪಟ್ಟಿರಬಹುದು. ಆದರೆ ನಾಗಪ್ಪನವರನ್ನು ಎಸ್‌ಟಿಎಫ್ ಪೊಲೀಸರು ಇಲ್ಲವಾಗಿಸಿದರೋ ಅಥವಾ ವೀರಪ್ಪನ್ ಕೊಂದನೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications