ಉದ್ಯೋಗಾವಕಾಶ : ವಿಪ್ರೋಗೆ ಇನ್ನಷ್ಟು ಐಟಿ ಪರಿಣತರು ಬೇಕಾಗಿದ್ದಾರೆ
ಬೆಂಗಳೂರು : ವಿಪ್ರೋ ಟೆಕ್ನಾಲಜೀಸ್‌ಗೆ ಸಾಕಷ್ಟು ವೃತ್ತಿಪರರು ಮತ್ತು ವಿಶೇಷ ಪರಿಣತರು ಬೇಕಾಗಿದ್ದಾರೆ. ಈ ಅರ್ಹತೆ ನಿಮಗಿದ್ದರೆ ಟ್ರೆೃ ಮಾಡಿ.
ಪ್ರಾಜೆಕ್ಟ್ ಮೇನೇಜರ್‌ಗಳು, ಫಂಕ್ಷನಲ್ ಎಕ್ಸ್‌ಪರ್ಟ್‌ಗಳು ನಮಗೆ ಸಾಕಷ್ಟು ಸಂಖ್ಯೆಯಲ್ಲಿ ಬೇಕು. ತಂತ್ರಜ್ಞಾನಿಗಳಷ್ಟೇ ಅಲ್ಲದೆ, ಕಾರ್ಯ ಸಲಹೆಗಾರರು, ಪ್ಯಾಕೇಜ್‌ಗಳನ್ನು ಜಾರಿಗೊಳಿಸಬಲ್ಲ ನುರಿತರೂ ಆಗಿರಬೇಕು. ಅರ್ಹ ಜಾಣರಿಗೆ ಮಾತ್ರ ಆದ್ಯತೆ ಎಂದು ವಿಪ್ರೋ ಉಪಾಧ್ಯಕ್ಷ ವಿವೇಕ್ ಪಾಲ್ ಹೇಳಿದ್ದಾರೆ.
ಅಂದಹಾಗೆ, 2002ರ ಮಾರ್ಚ್ 31ಕ್ಕೆ ಸರಿಯಾಗಿ ವಿಪ್ರೋ ಟೆಕ್ನಾಲಜೀಸ್‌ನಲ್ಲಿ 9,626 ಮಂದಿ ಕೆಲಸ ಮಾಡುತ್ತಿದ್ದಾರೆ. 2001ರ ಇದೇ ಅವಧಿಗೆ ಹೋಲಿಸಿದರೆ, ಸಿಬ್ಬಂದಿ ಸಂಖ್ಯೆಯಲ್ಲಿ 308 ಕಡಿತವಾಗಿದೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications