ಚೆನ್ನೈನ ಕಾರ್ಪೊರೇಟ್‌ ಆಸ್ಪತ್ರೆಯಲ್ಲಿ ನರ್ಸ್‌ ರೂಪದ ಬ್ರಾಥೆಲ್‌ !

ಚೆನ್ನೈ : ವೇಶ್ಯಾವಾಟಿಕೆ ನಡೆಸುತ್ತಿದ್ದ ನಗರದ ಕಾರ್ಪೊರೇಟ್‌ ಕಾರ್ಪೊರೇಟ್‌ ಆಸ್ಪತ್ರೆಯ ಪರಿಚಾರಕಿ (ನರ್ಸ್‌) ಇದೀಗ ಪೊಲೀಸರ ಅತಿಥಿ. ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳೇ ಈಕೆಯ ಗಿರಾಕಿಗಳು!

ಪರಿಚಾರಕಿ ಹೆಸರು ನಳಿನಿ. ವಯಸ್ಸು 42. ಎರಡು ಡೈವೋರ್ಸ್‌ ಆಗಿವೆ. ಹೊಟ್ಟೆ ಹೊರೆಯಲು ಪರಿಚಾರಕಿ ಕೆಲಸ ಸಾಕಿತ್ತು. ಆದರೆ ಮಾನಸಿಕವಾಗಿ ತುಳಿತಕ್ಕೆ ಸಿಲುಕಿದ್ದ ಈಕೆ ಹಿಡಿದದ್ದು ವೇಶ್ಯಾವಾಟಿಕೆಯ ಹಾದಿ. ಕೊಯಮತ್ತೂರಿನ 26ರ ಹರೆಯದ ಜಾನಕಿ ಈಕೆಯ ದಂಧೆಯ ಸಾಥಿ. ಈಕೆಯೂ ಪೊಲೀಸ್‌ ಠಾಣೆಯಲ್ಲೀಗ ಬಂಧಿ.

ಕಾರ್ಪೊರೇಟ್‌ ಆಸ್ಪತ್ರೆಗೆ ಬರುತ್ತಿದ್ದ ಅನೇಕ ರೋಗಿಗಳಿಗೆ ಔಷಧಿ ಸೇವೆಯ ನಂತರ ನಳಿನಿಯ ಉಪಚಾರ. ಹುಡುಗಿ ಬೇಕಾದವರಿಗೆ ಚೇಟ್‌ಪೇಟ್‌ನ ತನ್ನ ಮನೆಯಲ್ಲಿ ಆತಿಥ್ಯ. ಪ್ರಜ್ಞೆ ತಪ್ಪುವ ಔಷಧಿ ಕೊಟ್ಟು ಹುಡುಗಿಯರನ್ನು ತನ್ನ ಅಡ್ಡೆಗೆ ಒಯ್ಯುತ್ತಿದ್ದುದೂ ಉಂಟು. ಡಾ.ಪ್ರಕಾಶ್‌ ಎಂಬ ಮೂಳೆ ತಜ್ಞ ಈಕೆಯ ಬೆಂಬಲಿಗ. ಫಾದರ್‌ ಆಫ್‌ ಇಂಟರ್ನೆಟ್‌ ಸೆಕ್ಸ್‌ ಎಂಬ ಅಡ್ಡ ಹೆಸರು ಈತನದು.

ಮೊನ್ನೆ ಜಾಣತನದಿಂದ ರೋಗಿಯಂತೆ ನಟಿಸಿ, ಈಕೆ ದಂಧೆ ನಡೆಸುವ ಜಾಗಕ್ಕೆ ನುಗ್ಗಿದ ಪೊಲೀಸರಿಗೆ ನಳಿನಿಯ ವಿಶ್ವರೂಪದರ್ಶನದ (ಅನೇಕ ಗಂಡಸರೊಂದಿಗೆ) ಫೋಟೋಗಳು ದೊರೆತಿವೆ. ಸೊಗಸಾದ ಮಂಚಗಳ ಮೇಲೆ ಹಸನಾದ ಹಾಸುಗೆ, ಭಾರೀ ಸೋಫಾಗಳು, ತರಾವರಿ ಮದ್ಯಗಳ ಕ್ಲಬ್ಬು ಎಲ್ಲವೂ ಇರುವ ಈಕೆಯ ಮನೆಯಲ್ಲಿ ಪೊಲೀಸರಿಗೆ ಸಾಕಷ್ಟು ಪುರಾವೆಗಳು ದೊರೆತಿವೆ.

ಅರಳು ಹುರಿದಂತೆ ಇಂಗ್ಲೀಷು ಮಾತನಾಡಿ, ರೋಗಿಗಳ ಮರಳು ಮಾಡಿ ನಳಿನಿ ದಂಧೆ ನಡೆಸುತ್ತಿದ್ದರೆ, ಕೊಯಮತ್ತೂರಿನ ಬ್ಯೂಟಿಷಿಯನ್‌ ಜಾನಕಿ ಈಕೆಗೆ ಹುಡುಗಿಯರ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದಳು. ಚಿತ್ರ ನಟಿಯಾಗಿಸುವುದು ಈಕೆ ಹುಡುಗಿಯರಿಗೆ ಒಡ್ಡುತ್ತಿದ್ದ ಆಮಿಷ. ಚೆನ್ನೈನ ಹೊರಗೂ ಈಕೆಯ ಜಾಲಗಳು ಹರಡಿರುವ ಗುಮಾನಿಯಿದ್ದು, ತನಿಖೆ ಮುಂದುವರೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ಲೋಕೋಭಿನ್ನರುಚಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+