ಪ್ರೀತ್ಸೆ ಅಂತ ಎಪ್ಪತ್ಮೂರರ ಯುವತಿ ಬೆನ್ನುಹತ್ತಿದಾತನ ವಯಸ್ಸು 69!

ಟೋಕಿಯೋ : ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ..., ಬಾರೆ ರಾಜಕುಮಾರಿ ಹೋಗೋಣ ಜಂಬೂಸವಾರಿ !
ಎಪ್ಪತ್ಮೂರರ ಜಪಾನಿ ಹೆಂಗಸಿಗೆ ಈ ರೀತಿ ಬುಲಾವು. ನಿನ್ನ ಬಿಟ್ಟಿರಲಾರೆ. ನನ್ನವಳಾಗು. ನಾವಿಬ್ಬರೂ ಸೇರಿ ಸುತ್ತೋಣ ಬಾ... ಹೀಗೆ ಏನೇನೋ ಮಾತುಗಳು. ಈಕೆಗೆ ಕಳೆದ ಫೆಬ್ರವರಿ 22ರಿಂದ ಮೊನ್ನೆವರೆಗೂ ಪದೇಪದೇ ಫೋನಿನಲ್ಲಿ ಈ ಮಾತುಗಳನ್ನು ಕೇಳಿ ಕೇಳಿ ರೋಸಿಹೋಗಿದೆ. ಪೊಲೀಸರಿಗೆ ದೂರಿತ್ತಿದ್ದಾಳೆ. ಕೊನೆಗೆ ಪೊಲೀಸರು ಆ ಕರೆ ಮಾಡಿದವರನ್ನು ಪತ್ತೆ ಮಾಡಿ, ಬಂಧಿಸಿದ್ದಾರೆ.

ಬಂಧಿತನ ವಯಸ್ಸು 69 ವರ್ಷ. ಯಾವುದೋ ಕೋಚಿಂಗ್‌ ಕ್ಯಾಂಪ್‌ ಒಂದರಲ್ಲಿ 73ರ ಹರೆಯದ ಹೆಂಗಸನ್ನು ಕಂಡು ದಂಗಾಗಿ ಹೋದ ಈ ಚಿರ ಯೌವ್ವನಿಗನಿಗೆ ನಿದ್ದೆಯೇ ಹತ್ತಲಿಲ್ಲವಂತೆ. ನನಗೆ ಆಕೆಯ ಜೊತೆ ಒಂದೇ ಒಂದು ಬಾರಿ ಸುತ್ತಬೇಕೆಂಬ ದೊಡ್ಡ ಕನಸಿದೆ. ಅದನ್ನು ತೀರಿಸಿಕೊಳ್ಳಲು ಫೋನು ಮಾಡಿದೆ. ಆಕೆ ಸಮ್ಮತಿಸಲಿಲ್ಲ. ನಾನೊಬ್ಬ ಹುಚ್ಚು ಪ್ರೇಮಿ, ಅಷ್ಟೆ. ನನ್ನನ್ನು ಬಿಟ್ಟುಬಿಡಿ ಅಂತ ಈ ಮುದಿ ಪ್ರೇಮಿ ಪೊಲೀಸರಲ್ಲಿ ಅಲವತ್ತುಕೊಳ್ಳುತ್ತಿದ್ದಾನೆ.

ಅಂದಹಾಗೆ, ಹದಿನೈದು ದಿನಗಳ ಅವಧಿಯಲ್ಲಿ ಈತ ಮಾಡಿರುವ ಪ್ರೇಮ ಕರೆಗಳ ಸಂಖ್ಯೆ ಬರೋಬ್ಬರಿ 200! ಇಂಥಾ ಪ್ರೇಮ ಅಮರವಾಗಲಿ ಎನ್ನುತ್ತಿದ್ದಾರೆ ದೂರವಾಣಿ ಇಲಾಖೆಯ ಅಧಿಕಾರಿಗಳು !

(ಇನ್ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+