ಎಸ್ಸೆಸ್ಸೆಲ್ಸಿ: ಪರೀಕ್ಷೆ ಬರೆಯಲು ದೃಷ್ಟಿಹೀನರಿಗೆ 1 ಗಂಟೆ ಹೆಚ್ಚು ಕಾಲಾವಕಾಶ
ಬೆಂಗಳೂರು : ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರತಿ ಪತ್ರಿಕೆ ಬರೆಯಲು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಒಂದು ತಾಸು ಹೆಚ್ಚು ಕಾಲಾವಧಿ ನೀಡಲು ಮಂಡಳಿ ನಿರ್ಧರಿಸಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶನಿವಾರ ಈ ಕುರಿತ ಸುದ್ದಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ದೈಹಿಕ ತೊಂದರೆಗಳಿರುವ ಮಂದಿ ಕುರಿತು ಕಚೇರಿಯ ಆಯುಕ್ತರು, ದೃಷ್ಟಿಹೀನರಿಗೆ ಪರೀಕ್ಷೆ ಬರೆಯಲು ಈಗಿನ ಕಾಲಾವಧಿ ಸಾಕಾಗುತ್ತಿಲ್ಲ. ಅದನ್ನು ಒಂದು ತಾಸಿನಷ್ಟು ಹೆಚ್ಚು ಮಾಡಬೇಕೆಂದು ಮಂಡಳಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಮಂಡಳಿ ಪರೀಕ್ಷೆ ಬರೆಯಲು ದೃಷ್ಟಿಹೀನರಿಗೆ ಒಂದು ತಾಸಿನ ಹೆಚ್ಚು ಅವಧಿಯನ್ನು ಕೊಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications