ಬೆಂಗಳೂರಲ್ಲಿ ಕಾರ್‌ ಓಡಿಸುವವರು ಬೆಲ್ಟ್‌ ಕಟ್ಟಿಕೊಳ್ಳುವುದು ಕಡ್ಡಾಯ

ಬೆಂಗಳೂರು : ನಗರದಲ್ಲಿ ಕಾರುಗಳನ್ನು ಓಡಿಸುವವರು ಹಾಗೂ ಮುಂದಿನ ಆಸನದಲ್ಲಿ ಕುಳಿತುಕೊಳ್ಳುವವರು ಸೀಟ್‌ ಬೆಲ್ಟ್‌ಗಳನ್ನು ಹಾಕಿಕೊಳ್ಳುವುದು ಕಡ್ಡಾಯ. ಇದನ್ನು ಉಲ್ಲಂಘಿಸಿ, ಸಿಕ್ಕಿಬಿದ್ದಲ್ಲಿ ಸ್ಥಳದಲ್ಲೇ 300 ರುಪಾಯಿ ದಂಡ ಕಟ್ಟಬೇಕು. ಏಪ್ರಿಲ್‌ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಸಾರಿಗೆ ಆಯುಕ್ತ ಟಿ.ತಿಮ್ಮೇಗೌಡ ಬುಧವಾರ ಹೇಳಿದ್ದಾರೆ.

ಮೋಟಾರ್‌ ಸೈಕಲ್‌ಗಳು ಹಾಗೂ 500 ಸಿಸಿಯ ತ್ರಿಚಕ್ರ ವಾಹನಗಳು ಈ ನಿಯಮಕ್ಕೆ ಒಳಪಡುವುದಿಲ್ಲ. 500 ಸಿಸಿಗೆ ಮೇಲ್ಪಟ್ಟ ತ್ರಿಚಕ್ರ ಹಾಗೂ ಕಾರುಗಳನ್ನು ಓಡಿಸುವವರು ಈ ನಿಯಮವನ್ನು ತಪ್ಪದೇ ಪಾಲಿಸಬೇಕು. ರಸ್ತೆ ಸುರಕ್ಷತೆಯ ನಿಯಮಗಳ ಕಟ್ಟುನಿಟ್ಟು ಪಾಲನೆ ಪರೀಕ್ಷೆ ಮಾಡುವ ಸಲುವಾಗಿ ಮಾರ್ಚ್‌ 14ರಿಂದ 20ರವರೆಗೆ ವಿಶೇಷ ತಂಡಗಳು ದಿನದ ಇಪ್ಪತ್ನಾಲ್ಕೂ ಗಂಟೆ ರಸ್ತೆಯಲ್ಲಿರಲಿವೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.

ಸುಮಾರು 25 ವಿಶೇಷ ಪಡೆಗಳು ರಸ್ತೆ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಿವೆ. ಮೋಟಾರು ವಾಹನ ಕಾಯ್ದೆಗೆ ಧಕ್ಕೆ ತರುವ ಈ ಕೆಳಗಿನ ಅಂಶಗಳನ್ನು ಪಡೆಗಳು ಗಮನಿಸಲಿವೆ...

  • ಸ್ಲೋಗನ್ನು, ಯಾರದೋ ಹೆಸರು ಬರೆದಿರುವ ನಂಬರ್‌ ಪ್ಲೇಟ್‌ಗಳು.
  • ಗಾಡಿ ಬಿಡುವಾಗ ಮೊಬೈಲ್‌ ಬಳಸುವುದು.
  • ಪರವಾನಗಿ ಇಲ್ಲದೆ ಗಾಡಿ ಓಡಿಸುವುದು.
  • ಬಾಗಿಲುಗಳಿಲ್ಲದ ಮ್ಯಾಕ್ಸಿಕ್ಯಾಬ್‌ ಚಾಲನೆ.
  • ತೆರಿಗೆ ಕಟ್ಟದೆಯೇ ಕರ್ನಾಟಕದಲ್ಲಿ ಸಂಚರಿಸುತ್ತಿರುವ ಇತರೆ ರಾಜ್ಯಗಳ ವಾಹನಗಳು.
  • ಸೂಕ್ತ ದಾಖಲೆಗಳಿಲ್ಲದೆ ಓಡಾಡುವ ವಾಹನಗಳು.
  • ಕರೆದಲ್ಲಿಗೆ ಬರಲು ಒಪ್ಪದ ಆಟೋಗಳು.
  • ಮೋಟಾರು ವಾಹನ ಕಾಯ್ದೆಯನ್ವಯ ಬಣ್ಣ ಬದಲಿಸದ ನಂಬರ್‌ ಪ್ಲೇಟ್‌ಗಳು.
  • ಟೂರಿಸ್ಟ್‌ ಆಮ್ನಿ ಬಸ್‌ಗಳಲ್ಲಿ ಸರಕು ಸಾಗಣೆ.
  • ಹೊಗೆಯುಗುಳುವ ವಾಹನಗಳು.
  • ಅತಿ ವೇಗ, ಅತಿ ಸರಕು ಭರ್ತಿ.
  • ಆಟೋರಿಕ್ಷಾ ಮೀಟರ್‌ಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವುದು.
  • ಯೂನಿಫಾರಂ ಹಾಕಿಕೊಳ್ಳದೆಯೇ ಟ್ರಾನ್ಸ್‌ಪೋರ್ಟ್‌ ವಾಹನಗಳ ಚಾಲನೆ.

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+