ಮನಸ್ಸಿನ ಜೊತೆ ಮಾತಿಗೆ ಕೂರಬೇಕಾದದ್ದು ಬುದ್ಧಿ ಅಲ್ಲ ಕಣೋ, ಹೃದಯ
*ಮಮತಾ, ಬೆಂಗಳೂರು
Hello!
ಕೋತಿ ಬುದ್ಧಿಯ ಕರಡಿ ಪ್ರೀತಿಯ ಹುಡುಗ,
ನೆನ್ನೆ ತುಂತುರು ಮಳೆಯಾಗುತ್ತಿತ್ತಲ್ಲ. ಯಾವ ಮರದ ಕೆಳಗೆ ನಿಂತಿದ್ದೆಯೋ, ಕೋತಿ? ಮಳೆಗೂ ಒಂದೊಂದು ಸಾರಿ ಕರುಣೆನೇ ಇರಲ್ಲ ಕಣೋ. ನೀನು ತುಂಬಾ ಚೆನ್ನಾಗಿ dress ಮಾಡಿಕೊಳ್ಳೋದೇ ಅಪರೂಪ. ಹಾಗಿರುವಾಗ ನೀನು ಚೆನ್ನಾಗಿ dress ಮಾಡಿಕೊಂಡ ಇಂಥ ದಿನಗಳಲ್ಲೇ ನೀನೇ ಬಲವಂತ ಮಾಡಿ ಕರೆದೆಯೇನೋ ಅನ್ನುವ ಹಾಗೆ ಮಳೆ ಬಂದಿರುತ್ತೆ. ಹೌದು, ಮರದ ಕೆಳಗೆ ನಿಂತು ನಿನ್ನ ತಣ್ಣನೆಯ ಜೋಡಿ ಕಣ್ಣುಗಳು ಯಾರನ್ನೋ ಹುಡುಕುತ್ತಾ ಇದ್ದ ಹಾಗೆ ಇತ್ತು. ನಿನಗೆ ಹೇಗೆ ಗೊತ್ತು ಅಂತ ಕೇಳುತ್ತೀಯಾ?
10% urgency, 15% ತಾಳ್ಮೆ, 20% ಮುಗ್ಧತೆ, 5% stupidity, 50% ಪ್ರೀತಿ- ಈ formulaನ ಇಟ್ಟುಕೊಂಡು ಒಂದು experiment ಮಾಡಿದರೆ, ಅದರ ರಿಸಲ್ಟ್ ನೀನು. ನಿಜ ಹೇಳುತ್ತೀನಿ ಕಣೋ, ನನಗೆ ನಿನ್ನ ಕಣ್ಣು ಅಂದರೆ ಭಾರಿ ಇಷ್ಟ . ಆಕಾಶದಲ್ಲಿರೋ ನಕ್ಷತ್ರಗಳ ಪೈಕಿ ಎರಡು ನಕ್ಷತ್ರಗಳು ಚಂದ್ರನಿಗೆ, ‘ಸ್ವಲ್ಪ ಕೆಲಸ ಇದೆ, ಈಗ ವಾಪಸ್ಸು ಬರ್ತೀವಿ’ ಅಂತ ರಜೆ ಹೇಳಿಕೊಂಡು ಬಂದ ಹಾಗಿದೆ.
ಹೌದು, ಅವತ್ತು ನಾನು ಏನು ಹೇಳಿದೆ ಅಂತ ಹಾಗೆ ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ನಿನ್ನದು ಶುದ್ಧ ಹೆಣ್ಣಿನ ಮನಸ್ಸು ಕಣೋ. ನೀನು ಕೇಳಿದ್ದಾದರೂ ಎಂತಹ ಪ್ರಶ್ನೆ- ‘ಈ ಪ್ರಪಂಚದಲ್ಲಿ ನೀನು ಯಾರನ್ನು ತುಂಬಾ ಪ್ರೀತಿಸ್ತೀಯಾ’ ಅಂತ. ನನಗೆ ಅದು ಯೋಚನೆ ಮಾಡುವಂಥ ಪ್ರಶ್ನೇನೇ ಅಲ್ಲ ಕಣೋ. ನಾನು ತುಂಬಾ ಪ್ರೀತಿಸೋದು ನನ್ನ friend ಶಶಿಕಲಾನ. ನಿನಗೆ ಗೊತ್ತಾ, ಹಿಂದಿನ ಕಾಲದಲ್ಲಿ fantasy storiesನಲ್ಲಿ ಬರೋ person ತನ್ನ ಪ್ರಾಣನಾ ಗಿಳಿನಲ್ಲೋ ಪಾರಿವಾಳದಲ್ಲೋ ಇಡುತ್ತಾ ಇದ್ದನಂತೆ. ಅವುಗಳಿಗೆ ಸ್ವಲ್ಪ ನೋವಾದರೂ ಈ ವ್ಯಕ್ತಿಗೆ ನೋವಾಗುತ್ತಾ ಇತ್ತಂತೆ. ಹಾಗೆಯೇ ನಾನು ನನ್ನ ಪ್ರಾಣಾನ ಶಶಿಯಲ್ಲಿ ಇಟ್ಟುಬಿಟ್ಟಿದ್ದೀನಿ. ಅವರಿಗೆ ನೋವಾದರೆ ನನ್ನ ಪ್ರಾಣನೇ ಹೋಗಿಬಿಡುತ್ತೆ.
ನನಗೆ ಗೊತ್ತು, ನನ್ನ ನಿಜ ನಿನಗೆ ಸಂತೋಷ ಕೊಡೋದಿಲ್ಲ. ನಿನ್ನ ಸಂತೋಷಕ್ಕಾಗಿ ಸುಳ್ಳು ಹೇಳೋದು ನನಗೆ ಗೊತ್ತಿಲ್ಲ. ಪ್ರೀತಿ ಅನ್ನೋದು ಮೊಲದ ಬಿಳುಪಿನ ಹಾಳೆ ಕಣೋ. ಅಲ್ಲಿ ಸುಳ್ಳು ಅನ್ನೋ ಪ್ರತಿ ಕಪ್ಪು ಚುಕ್ಕೆಗೂ ದುಃಖದ tax ಕೊಡಬೇಕಾಗುತ್ತೆ. ಅದಕ್ಕೆ ಈಗಲೇ ಎಲ್ಲ clear ಆಗಿರಲಿ.
ನಿನಗೆ ದೇವರು ಬುದ್ಧಿ ಕಡಿಮೆ, ಪ್ರೀತಿ ಜಾಸ್ತಿ ಕೊಟ್ಟಿದ್ದಾನೆ. ಒಂದೊಂದು ಸಾರಿ ಅನ್ನಿಸುತ್ತೆ, ‘ದೇವರು ಸರಿಯಾಗೇ ಮಾಡಿದ್ದಾನೆ’ ಅಂತ. ತುಂಬಾ ಬುದ್ಧಿ ಇರೋ ವ್ಯಕ್ತಿ ಯಾರನ್ನೂ ಪ್ರಾಮಾಣಿಕವಾಗಿ ಪ್ರೀತಿಸುವುದಿಲ್ಲವೇನೋ? ಯಾವುದೋ ಸಂದರ್ಭದಲ್ಲಿ ತನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ನಿಂತು ವ್ಯವಹಾರ ಮಾತಾಡಿಬಿಡುತ್ತಾನೇನೋ? ಪ್ರೀತಿ ಜೊತೆಗೆ ಮಾತಿಗೆ ಕೂರಬೇಕಾದ್ದು ಬುದ್ಧಿ ಅಲ್ಲ, ಹೃದಯ ಅಂತ ಅನಿಸುತ್ತೆ.
ಸಾರಿ ಕಣೋ ಕೋತಿ. letter ತುಂಬಾ long ಆಗುತ್ತಾ ಇದೆ. ಈ letter ಬರೆದ ಉದ್ದೇಶ ಏನು ಗೊತ್ತಾ? ಅವತ್ತು ನಿನ್ನ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಾ ಇದ್ದೆಯಲ್ಲ. ಆ ನೋಟದಲ್ಲಿ ಎರಡು ಪ್ರಶ್ನೆಗಳಿದ್ದವು. ಒಂದು : ನಿನಗೂ ನನಗೂ ಸಂಬಂಧನೇ ಇಲ್ಲವಾ? ಇನ್ನೊಂದು : ನಿನ್ನ friendನ ಯಾಕೆ ಅಷ್ಟೊಂದು ಪ್ರೀತಿಸ್ತೀಯಾ? ಅಂತ. Decide ಮಾಡಿಕೊಂಡು ಕೇಳು- ನಿನ್ನ ಯಾವ ಪ್ರಶ್ನೆಗೆ ಉತ್ತರ ಬೇಕು?
ಕಾಯುತ್ತಾ ಇರ್ತೀನಿ.
ಇಂತಿ,
ನೆನಪಾದವಳು.
ಈ ಪತ್ರದ ಬಗ್ಗೆ ನೀವೇನಂತೀರಿ? ನಿಮಗೂ ಬರೆಯುವ ಮನಸ್ಸಾಗುತ್ತಿದೆಯಾ? ಹಾಗಾದರೆ ತೊಡಗಿಕೊಳ್ಳಿ.
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications