ಎಕ್ಸಿಟ್ ಪೋಲನ್ನು ದೂರದರ್ಶನ ಕೈ ಬಿಡುವುದಿಲ್ಲ- ಪ್ರೊ. ಯು.ಆರ್.ರಾವ್
ಬೆಂಗಳೂರು: ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಚುನಾವಣೆಗಳ ಎಕ್ಸಿಟ್ ಪೋಲ್‌ಗಳನ್ನು ದೂರದರ್ಶನ ನಿಷೇಧಿಸುವುದಿಲ್ಲ ಎಂದು ಪ್ರಸಾರ ಭಾರತಿ ಮಂಡಳಿಯ ಅಧ್ಯಕ್ಷ ಪ್ರೊ. ಯು.ಆರ್.ರಾವ್ ಸ್ಪಷ್ಟಪಡಿಸಿದ್ದಾರೆ.
ಎಕ್ಸಿಟ್ ಪೋಲ್‌ಗಳೆಂದರೆ ಎಕ್ಸಿಟ್ ಪೋಲ್‌ಗಳು ಅಷ್ಟೆ . ಇಷ್ಟಕ್ಕೂ ಇವುಗಳು ಕಡಿಮೆ ವ್ಯಾಪ್ತಿಯ ಸ್ಯಾಂಪಲ್‌ಗಳಾಗಿರುತ್ತವೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಆರ್.ರಾವ್ ಹೇಳಿದರು. ಕೆಲವು ರಾಜಕೀಯ ಪಕ್ಷಗಳು ವಿರೋಧಿಸುತ್ತವೆ ಎಂದ ಮಾತ್ರಕ್ಕೆ ಪೋಲ್‌ಗಳನ್ನು ಕೈ ಬಿಡಲು ಸಾಧ್ಯವಿಲ್ಲ . ಅಭಿಪ್ರಾಯ ತಮ್ಮ ಪರವಾಗಿದ್ದರೆ ಇಂಥ ವಿರೋಧಗಳು ವ್ಯಕ್ತವಾಗುವುದೇ ಇಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.
ದೂರದರ್ಶನ ಎಕ್ಸಿಟ್ ಪೋಲ್‌ಗಳನ್ನು ನೇರವಾಗಿ ಕೈಗೊಳ್ಳದೆ ಏಜೆನ್ಸಿಯಾಂದಕ್ಕೆ ವಹಿಸಿಕೊಡುತ್ತಿರುವ ವಿಷಯವನ್ನು ಪ್ರೊ.ರಾವ್ ಸುದ್ದಿಗಾರರ ಗಮನಕ್ಕೆ ತಂದರು. ಬ್ರಾಡ್‌ಕಾಸ್ಟಿಂಗ್ ಮಸೂದೆ ಅಂಗೀಕಾರಗೊಂಡ ನಂತರ ಖಾಸಗಿ ವಾಹಿನಿಗಳಿಗೆ ತನ್ನಲ್ಲಿನ ಮೂಲಭೂತ ಸೌಕರ್ಯಗಳನ್ನು ದೂರದರ್ಶನ ಒದಗಿಸಲಿದೆ ಎಂದು ಅವರು ಹೇಳಿದರು.
ದೂರದರ್ಶನ ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಪರಿಚಯಿಸುವ ಕುರಿತು ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳುವುದು. ಆದರೆ, ಇನ್‌ಫಾರ್ಮೇಷನ್ ಅಂಡ್ ಬ್ರಾಡ್‌ಕಾಸ್ಟಿಂಗ್ ಸಚಿವಾಲಯದಲ್ಲೇ ಇನ್ನೂ ನೌಕರರಾಗಿ ಮುಂದುವರಿದಿರುವ ನೌಕರರಿಗೆ, ಪ್ರಸಾರಭಾರತಿಗೆ ಸೇರಿಕೊಳ್ಳಲು ಆಯ್ಕೆಯ ಅವಕಾಶ ನೀಡುವುದು ಸದ್ಯದ ಆದ್ಯತೆಯಾಗಿದೆ ಎಂದು ರಾವ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications