ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಮಕ್ಕಳ 50 ವರ್ಷದ ಈ ಮಾತಾಯಿ 40 ವರ್ಷದಿಂದ ನಿದ್ದೆ ಮಾಡಿಲ್ಲ

By Staff
|
Google Oneindia Kannada News

ನೀವು ಎಷ್ಟು ಕಾಲ ನಿದ್ದೆಯಿಲ್ಲದೆ ಇರುತ್ತೀರಿ. ಒಂದು ದಿನ, ಎರಡು ದಿನ. ರವಿ ಬೆಳಗೆರೆಯಂಥ ಮನುಷ್ಯ ಮೂರ್ನಾಲ್ಕು ದಿನ ಪಟ್ಟು ಬಿಡದೆ ಅಕ್ಷರ ಕೆತ್ತುತ್ತಾ ಕೂರಬಲ್ಲ . ಆದರೆ, ಆನಂತರದ ಆಯಾಸ ಇರುತ್ತದಲ್ಲ . ನಿದ್ದೆಯಿಲ್ಲದ ಕಳೆದ ಗಂಟೆಗಳಷ್ಟೇ ಹೆಚ್ಚಿನ ನಿದ್ದೆಯನ್ನು ಆನಂತರ ಮಾಡಿಯೇ ತೀರಬೇಕು.

ಆದರೆ, ಸಬ್ರಾನ್‌ ಬೀಬಿ ಎನ್ನುವ ಐವತ್ತು ವರ್ಷ ವಯಸ್ಸಿನ ಈ ಪಾಕಿಸ್ತಾನಿ ಮಹಿಳೆ ಕಳೆದ ನಲವತ್ತು ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ ! ವೈದ್ಯಕೀಯ ಕ್ಷೇತ್ರ ಈಕೆಯನ್ನು ಅಚ್ಚರಿಯಿಂದ ನೋಡುತ್ತಿದೆ.

ಪಂಜಾಬ್‌ ಪ್ರಾಂತ್ಯದ ಒಕಾರ ಜಿಲ್ಲೆಯ ಈ ಹೆಣ್ಣು ಮಗಳು ತನ್ನ ಬಾಲ್ಯದಿಂದ ಈವರೆಗೂ ಒಂದು ನಿಮಿಷವೂ ಕಣ್ಣು ತುಂಬ ನಿದ್ದೆ ಮಾಡಿದ್ದೇ ಇಲ್ಲ . ಅಂದಹಾಗೆ, ಯಾವ ಸುಂದರಾಂಗನೂ ಈಕೆಯ ನಿದ್ದೆಯನ್ನು ಕದ್ದಿಲ್ಲ ; ಯಾವುದೋ ಕಾಯಿಲೆಯಿಂದ ಆಕೆ ಬಳಲ್ತುತಿರಬೇಕು. ದೀರ್ಘ ತಪಾಸಣೆಗಳಿಂದ ತೊಂದರೆಯನ್ನು ಪತ್ತೆ ಹಚ್ಚಬಹುದು ಎನ್ನುತ್ತದೆ ನರಶಾಸ್ತ್ರಜ್ಞರ ಗುಂಪು.

ಬೀಬಿಗೆ ಸದಾ ಕಾಲವೂ ಕಾಡುವ ಸಣ್ಣನೆ ತಲೆ ನೋವು. ಕಣ್ಣುಗಳ ತುಂಬ ನೀರಿನ ಪೊರೆ. ನನಗೆ ಹಗಲು- ರಾತ್ರಿಯ ನಡುವೆ ವ್ಯತ್ಯಾಸವೇ ಇಲ್ಲ ಎಂದು ವಿಷಾದದಿಂದ ಹೇಳುವ ಬೀಬಿಗೆ ನಾಲ್ಕು ಮಕ್ಕಳು. ಯಾರಿಗೂ ನಿದ್ದೆಯ ತೊಂದರೆಯಿಲ್ಲ . ಕುಗ್ರಾಮಕ್ಕೆ ಸೇರಿದ ಬೀಬಿ ಬಡ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಭರಿಸುವ ಚೈತನ್ಯವಿಲ್ಲ . ಬೀಬಿ ನಿದ್ರಾ ಪ್ರಕರಣವನ್ನು ವರದಿ ಮಾಡಿರುವುದು- ಪಿಟಿವಿ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X