ಮಣಿಪಾಲದಲ್ಲಿ ಗೋ-ಕಾರ್ಟಿಂಗ್‌ ಮನರಂಜನಾ ಕಾಂಪ್ಲೆಕ್ಸ್‌ ಆರಂಭ

ಮಣಿಪಾಲ : ಗೋ- ಕಾರ್ಟಿಂಗ್‌ ಎಂಬ ನೂತನ ಮನರಂಜನೆ ಆಟದ ವ್ಯವಸ್ಥೆಯನ್ನು ಉಡುಪಿ ಜಿಲ್ಲಾಧಿಕಾರಿ ಗೌರವ್‌ ಗುಪ್ತಾ ಸೋಮವಾರ ಉದ್ಘಾಟಿಸಿದರು.

ಮಣಿಪಾಲ ನಗರದಲ್ಲಿರುವ ಈ ಗೋ-ಕಾರ್ಟಿಂಗ್‌ ಮನರಂಜನಾ ವ್ಯವಸ್ಥೆ ಪ್ರವಾಸಿಗಳಿಗೊಂದು ಆಕರ್ಷಣೀಯ ತಾಣವಾಗಲಿದೆ. ಆಧುನಿಕ ಯುಗದಲ್ಲಿ ಜನರ ಜೀವನ ಶೈಲಿಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಮನೋರಂಜನಾ ಉದ್ಯಮಕ್ಕೆ ಸಾಕಷ್ಟು ಬೇಡಿಕೆ ಇದೆ ಎಂದು ಗುಪ್ತಾ ಅಭಿಪ್ರಾಯಪಟ್ಟರು.

ಮೂಲಭೂತ ವ್ಯವಸ್ಥೆಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ. ಉಡುಪಿ ಜಿಲ್ಲೆಯ ಪೆರಂಪಳ್ಳಿಯ ರಸ್ತೆಗಳನ್ನು ಶೀಘ್ರದಲ್ಲಿಯೇ ಅಗಲಗೊಳಿಸಲಾಗುವುದು ಎಂದು ಗುಪ್ತಾ ಹೇಳಿದರು. ಇದೇ ಸಂದರ್ಭದಲ್ಲಿ ರಿkುೕಟಾ ಇನ್ಫೋಟೆಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ. ಗೌತಮ್‌ ಪೈ ಕಾರ್ಟಿಂಗ್‌ ರೇಸನ್ನು ಉದ್ಘಾಟಿಸಿದರು.

ಗೋ-ಕಾರ್ಟಿಂಗ್‌ ಮನರಂಜನಾ ಕಾಂಪ್ಸೆಕ್ಸ್‌ನ ಪಾಲುದಾರ ನಟರಾಜ್‌ ಮಾತನಾಡಿ 40 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಲಾಗಿರುವ ಈ ಕಾರ್ಟಿಂಗ್‌ ಆಟ ಫೆಬ್ರವರಿ 8ರಿಂದ ಸಾರ್ವಜನಿಕರಿಗಾಗಿ ತೆರೆದಿರುತ್ತದೆ ಎಂದರು. ಎಲ್ಲ ವಯಸ್ಸಿನ ನಾಗರಿಕರಿಗೆ ಈ ಗೋ-ಕಾರ್ಟಿಂಗ್‌ ಮನರಂಜನೆ ಒದಗಿಸಲಿದೆ ಎಂದು ಅವರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+