ಅಗ್ನಿ ಕ್ಷಿಪಣಿ ದೂರ ಸಾಮರ್ಥ್ಯ ಹೆಚ್ಚಳದ ಯೋಚನೆ : ಚುರುಕಾದ ಸಂಶೋಧನೆ
ಬೆಂಗಳೂರು : ಅಗ್ನಿ ಕ್ಷಿಪಣಿಯ ದೂರ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಭಾರತ ಯೋಚಿಸುತ್ತಿದೆ ಎಂದು ರಕ್ಷಣಾ ಅಧಿಕಾರಿಯಾಬ್ಬರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ಷಿಪಣಿಯ ತೂಕ ಕಡಿಮೆ ಮಾಡಿ, ಗಾಮಿ ದೂರವನ್ನು ಹೆಚ್ಚಿಸುವ ಯೋಚನೆ ಮೊದಲಿನಿಂದಲೂ ಇತ್ತು. ಇದು ಸಾಧ್ಯವಾದಲ್ಲಿ ಮಾತ್ರ ರಕ್ಷಣಾ ವಲಯದ ಅಭಿವೃದ್ಧಿಗೆ ಹೊಸ ವೇಗ ದಕ್ಕುತ್ತದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ.ಆತ್ರೆ ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಆತ್ರೆ, ಕ್ಷಿಪಣಿಯ ದೂರ ಸಾಮರ್ಥ್ಯವನ್ನು ಎಷ್ಟು ಹೆಚ್ಚಿಸಲಾಗುವುದು ಎಂದು ಹೇಳಲು ಇಚ್ಛಿಸಲಿಲ್ಲ. ಇದಕ್ಕೂ ಮುನ್ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ರೋಸ್ಪೇಸ್ ಮೆಡಿಸಿನ್‌ನಲ್ಲಿ ನಡೆದ ಸುಬ್ರೊತೊ ಮುಖರ್ಜಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಆತ್ರೆ, ಅಗ್ನಿ- 2ನ್ನು ಈಗಾಗಲೇ ಮೂರು ಬಾರಿ ಪ್ರಾಯೋಗಿಕವಾಗಿ ಉಡಾವಣೆ ಮಾಡಿರುವುದಾಗಿ ಹೇಳಿದರು.
ಕಳೆದ ವರ್ಷ ಜನವರಿ 4ರಂದು ನಡೆದಿದ್ದ ಹಗುರ ಯುದ್ಧ ವಿಮಾನ (ಎಲ್‌ಸಿಎ) ದ ತಾಂತ್ರಿಕ ವಿಷಯ ವಿವರಣಾ ಹಾರಿಕೆ (Technology Demonstrator1) ನಡೆದಿತ್ತು. ಇದೇ ತಿಂಗಳು Technology Demonstrator2 ಉದ್ದೇಶದಿಂದ ಹಗುರ ವಿಮಾನ ಮತ್ತೆ ಗಗನದತ್ತ ಹಾರಲಿದೆ. ಮಾನವ ರಹಿತ ಯುದ್ಧ ವಿಮಾನ ನಿಶಾಂತ್‌ನ ಅಭಿವೃದ್ಧಿ ಚುರುಕಾಗಿದೆ. ಈ ವರ್ಷದ ಮಧ್ಯಭಾಗದಲ್ಲಿ ರಕ್ಷಣಾ ಪಡೆಗಳಿಗೆ ಅದರ ಕಾರ್ಯವೈಖರಿಯನ್ನು ತಿಳಿಸಲಾಗುವುದು ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications