ಮನೆಕಟ್ಟುವವರಿಗೆ ಸಂತಸದ ಸುದ್ದಿ : ಕ್ಯಾನ್‌ಫಿನ್‌ ಬಡ್ಡಿ ದರ ಮತ್ತಷ್ಟು ಇಳಿಕೆ

ಬೆಂಗಳೂರು : ಮನೆ ಕಟ್ಟುವವರಿಗೊಂದು ಸಂತಸದ ಸುದ್ದಿ, ಈಗಾಗಲೇ ಸಾಕಷ್ಟು ಇಳಿದಿರುವ ಗೃಹ ನಿರ್ಮಾಣ ಸಾಲಗಳ ಮೇಲಿನ ಬಡ್ಡಿ ದರ ಈಗ ಇನ್ನಷ್ಟು ಇಳಿದಿದೆ. ಕ್ಯಾನ್‌ಫಿನ್‌ ಹೋಮ್ಸ್‌ ಲಿಮಿಟೆಡ್‌ ತಾನು ನೀಡುವ ಗೃಹ ನಿರ್ಮಾಣ ಸಾಲದ ಬಡ್ಡಿ ದರವನ್ನು ಜನವರಿ 14ರಿಂದ ಜಾರಿಗೆ ಬರುವಂತೆ (ಎಲ್ಲ ಸ್ಲ್ಯಾಬ್‌ಗಳ ಮೇಲೆ) ಶೇ.0.25ರಷ್ಟು ಇಳಿಸಿದೆ.

ಇದರಿಂದಾಗಿ ಐದು ವರ್ಷದ ಅವಧಿ ಸಾಲಗಳ ಮೇಲಿನ ಬಡ್ಡಿ ದರ ಶೇ.10.25 ಆಗಿದೆ. 6 ವರ್ಷಗಳಿಂದ 10 ವರ್ಷಗಳ ಅವಧಿಯ ಸಾಲಗಳ ಪೈಕಿ 2 ಲಕ್ಷ ರುಪಾಯಿವರೆಗಿನ ಸಾಲಕ್ಕೆ ಶೇ.11.25 ಮತ್ತು 2 ಲಕ್ಷ ಮೇಲ್ಪಟ್ಟ ಸಾಲಕ್ಕೆ 11.75ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.

11 ವರ್ಷಗಳಿಂದ 15 ವರ್ಷಗಳವರೆಗಿನ ದೀರ್ಘಾವಧಿಯ ಸಾಲಗಳ ಪೈಕಿ ಎರಡು ಲಕ್ಷ ರುಪಾಯಿಗಳವರೆಗಿನ ಸಾಲಕ್ಕೆ ಶೇ. 11.50 ಹಾಗೂ 2 ಲಕ್ಷ ರುಪಾಯಿ ಮೇಲ್ಪಟ್ಟ ಸಾಲಕ್ಕೆ ಶೇ. 12ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ. ಇದೇ ರೀತಿ 16 ವರ್ಷದಿಂದ 20 ವರ್ಷಗಳ ಅವಧಿ ಸಾಲಕ್ಕೆ 2 ಲಕ್ಷರುಪಾಯಿ ವರೆಗೆ ಶೇ.12.25 ಮತ್ತು 2 ಲಕ್ಷ ರು. ಮೇಲ್ಪಟ್ಟು ಶೇ. 12.50 ದರದ ಬಡ್ಡಿ ವಿಧಿಸಲಾಗುವುದು ಎಂದು ಕ್ಯಾನ್‌ಫಿನ್‌ ನಿರ್ದೇಶಕ ಜಿ. ಉಮೇಶ್‌ ಶೆಣೈ ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+