ಸುರಪೂರ ಬಳಿ ಲಾರಿ-ಸುಮೊ ಡಿಕ್ಕಿ : 12 ಮಂದಿ ಸ್ಥಳದಲ್ಲೇ ಸಾವು
ಗುಲ್ಬರ್ಗಾ: ಜಿಲ್ಲೆಯ ಸುರಪೂರ ಸಮೀಪ ಶನಿವಾರ ಬೆಳಗ್ಗೆ ಲಾರಿ ಹಾಗೂ ಟಾಟಾ ಸುಮೊ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾವಿಗೀಡಾದವರು, ಗುಲ್ಬರ್ಗಾ ಜಿಲ್ಲೆಯಲ್ಲಿನ ಪ್ರಸಿದ್ಧ ಭಗವತಿ ದೇವಸ್ಥಾನವನ್ನು ಸಂದರ್ಶಿಸಿಕೊಂಡು ತಮ್ಮೂರು ಚನ್ನಪಟ್ಟಣಕ್ಕೆ ಟಾಟಾ ಸುಮೊದಲ್ಲಿ ವಾಪಸ್ಸಾಗುತ್ತಿದ್ದರು. ಸೇಲಂ ಕಡೆಯಿಂದ ಬರುತ್ತಿದ್ದ ಲಾರಿ ಹಾಗೂ ಸುಮೊ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಟಾಟಾ ಸುಮೊ ಸಂಪೂರ್ಣ ಜಖಂಗೊಂಡಿದೆ. ಒಬ್ಬ ಪ್ರಯಾಣಿಕನಿಗೆ ತೀವ್ರ ಗಾಯಗಳಾಗಿದ್ದು , ಆತನನ್ನು ಅಫಜಲ್‌ಪುರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications