ತೃತೀಯ ತ್ರೆೃಮಾಸಿಕದಲ್ಲಿ ಸತ್ಯಂ ಕಂಪ್ಯೂಟರ್ಸ್‌ಗೆ 119 ಕೋಟಿ ರುಪಾಯಿ ಲಾಭ
ನವದೆಹಲಿ : ಭಾರತದ ನಾಲ್ಕನೇ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ಸತ್ಯಂ ಕಂಪ್ಯೂಟರ್ಸ್ ಪ್ರಸಕ್ತ ವಿತ್ತ ವರ್ಷದ ತೃತೀಯ ತ್ರೆೃಮಾಸಿಕದಲ್ಲಿ ಪ್ರತಿಶತ 36ರಷ್ಟು ಹೆಚ್ಚು ನಿವ್ವಳ ಲಾಭ ಗಳಿಸಿದೆ.
ಕಳೆದ ವಿತ್ತ ವರ್ಷದ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ಲಾಭಕ್ಕಿಂತ ಈಗ ಸಾಕಷ್ಟು ಹೆಚ್ಚಳವನ್ನು ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧಿಸಿರುವುದು ಕಂಪನಿಯ ಅಗ್ಗಳಿಕೆ. ಅಕ್ಟೋಬರ್‌ನಿಂದ ಡಿಸೆಂಬರ್ ಮಾಹೆಯ ಅವಧಿಯಲ್ಲಿ ಕಂಪನಿ ಗಳಿಸಿರುವ ಒಟ್ಟು ಲಾಭ 119 ಕೋಟಿ ರುಪಾಯಿ. ನಿವ್ವಳ ಆದಾಯ ಕೂಡ ನಿರೀಕ್ಷೆಗಿಂತ ಮೀರಿದ್ದು, 446 ಕೋಟಿ ರುಪಾಯಿ ಕಂಪನಿಯ ಬೊಕ್ಕಸ ತುಂಬಿದೆ. ಈ ಅವಧಿಯಲ್ಲಿ 27 ಹೊಸ ಗ್ರಾಹಕರು ಸಿಕ್ಕಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications