ಬೆಂಗಳೂರಿನಲ್ಲಿ 5ದಿನಗಳ ರಾಷ್ಟ್ರೀಯ ಗಾಲಿಕುರ್ಚಿ ಕ್ರೀಡಾಕೂಟ

ಬೆಂಗಳೂರು: ಅಂಗವಿಕಲರಿಗೂ ಕ್ರೀಡೆಯ ಆನಂದವುಣಿಸುವ ದೃಷ್ಟಿಯಿಂದ ನಗರದಲ್ಲಿ ಐದು ದಿನಗಳ ರಾಷ್ಟ್ರೀಯ ಗಾಲಿ ಕುರ್ಚಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ.

ಜನವರಿ 16ರಿಂದ ಆರಂಭವಾಗುವ ಈ ಕ್ರೀಡಾ ಕೂಟ ಜ.20ರಂದು ಸಮಾಪ್ತಿಯಾಗಲಿದೆ. ರಾಷ್ಟ್ರ ಮಟ್ಟದ ಈ ಕ್ರೀಡಾ ಕೂಟದಲ್ಲಿ ದೇಶದ ವಿವಿಧೆಡೆಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕ್ರೀಡಾಕೂಟದಲ್ಲಿ ನಡೆಸುವ ಈ ಸ್ಪರ್ಧೆಯಲ್ಲಿ ದೊರೆಯುವ ಪ್ರಶಸ್ತಿಗಳು ಮುಖ್ಯವಲ್ಲ. ಬದಲಾಗಿ ಕೂಟದಲ್ಲಿ ಭಾಗವಹಿಸಿದಾಗ ದೊರೆಯುವ ಸಂತಸವೇ ಮುಖ್ಯ ಉದ್ದೇಶವಾಗಿದೆ.

ಆಟೋಟಗಳಿಂದ ನಾವು ವಂಚಿತರು ಎಂಬ ಭಾವನೆಯನ್ನು ಅಂಗವಿಕಲರಿಂದ ತೊಲಗಿಸುವ ಸಲುವಾಗಿ ಈ ಕೂಟವನ್ನು ಆಯೋಜಿಸಿದ್ದು ಅವರ ಸಂತೋಷವೇ ಪ್ರಶಸ್ತಿ ಎಂದು ಗಾಲಿಕುರ್ಚಿ ಕ್ರೀಡಾ ಪಟು, ಅಂಗವಿಕಲರ ಕ್ರೀಡಾ ಪರಿಷತ್ತಿನ ಅಧ್ಯಕ್ಷೆ ಮಾಲತಿ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರೀಡಾ ಕೂಟದಲ್ಲಿ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+