ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಅತಿ ಕಿರಿಯ, ಮುತ್ತಯ್ಯ ಮುರಳೀಧರನ್
ಗಾಲೆ, ಜ.15 : ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಮಂಗಳವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 400ನೇ ಬಲಿ ತೆಗೆದುಕೊಂಡರು. ಇಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮುರಳಿ ಈ ಸಾಧನೆ ಮೆರೆದರು.
ಸೋಮವಾರ 66ರನ್ ನೀಡಿ 2 ವಿಕೆಟ್ ಗಳಿಸಿದ್ದ ಮುರಳೀಧರ್ ಮಂಗಳವಾರ ಜಿಂಬಾಬ್ವೆಯ ಕೊನೆಯ ಆಟಗಾರ ಹೆನ್ರೀ ಒಲೋಂಗಾ ಅವರನ್ನು ಔಟ್ ಮಾಡುವ ಮೂಲಕ ತಮ್ಮ ವಿಕೆಟ್‌ಗಳ ಸಾಧನೆಯ ಮಕುಟಕ್ಕೆ ಮತ್ತೊಂದು ಗರಿ ಸಿಕ್ಕಿಸಿಕೊಂಡರು.
ಕೇವಲ 29 ವರ್ಷ ವಯಸ್ಸಿನ ಮುತ್ತಯ್ಯ ಮುರಳೀಧರನ್ ತಮ್ಮ 72ನೇ ಟೆಸ್ಟ್ ಪಂದ್ಯದಲ್ಲಿ 400ನೇ ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ 400 ವಿಕೆಟ್ ಪಡೆದ ಕಿರಿಯ ಬೌಲರ್ ಎಂಬ ಕೀರ್ತಿಗೂ ಪಾತ್ರರಾದರು.
ಹಾಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಕೀರ್ತಿಗೆ ಭಾಜನರಾಗಿರುವ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್‌ರ 519 ವಿಕೆಟ್‌ಗಳ ದಾಖಲೆ ಮುರಿಯಲು ಮುತ್ತಯ್ಯ ಮುರಳೀಧರನ್ ಇನ್ನೂ ಸಾಕಷ್ಟು ದಾರಿ ಸವೆಸಬೇಕಿದೆ. ಆದರೆ, ಆ ಛಲ ಮುರಳೀಧರ್‌ರಲ್ಲಿದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications