ಜ.29ರಿಂದ ಬೆಂಗಳೂರಲ್ಲಿ ನಡೆಯಲಿದೆ ಎ.ಟಿ.ಪಿ. ಡಬಲ್ಸ್‌ ಟೂರ್ನಿ

ಬೆಂಗಳೂರು : ಆಫ್ಘಾನಿಸ್ತಾನದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರದ್ದಾಗಿದ್ದ ಎ.ಟಿ.ಪಿ. ವಿಶ್ವ ಡಬಲ್ಸ್‌ ಚಾಂಪಿಯನ್‌ಷಿಪ್‌ ಪಂದ್ಯಾವಳಿಗೆ ಮತ್ತೆ ಜೀವ ಬಂದಿದೆ. ಈ ಪಂದ್ಯಗಳು ಜನವರಿ 29ರಿಂದ ಫೆಬ್ರುವರಿ 2ರವರೆಗೆ ಕರ್ನಾಟಕ ರಾಜ್ಯ ಲಾನ್‌ ಟೆನ್ನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಮೈದಾನದಲ್ಲಿ ನಡೆಯಲಿದೆ.

ಕೆಎಸ್‌ಎಲ್‌ಟಿಎ ಕಾರ್ಯದರ್ಶಿಗಳ ಪ್ರಕಾರ ಈಗಾಗಲೇ ಆರು ತಂಡಗಳು ಈ ಪಂದ್ಯದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿವೆ. ಇನ್ನೂ ಎರಡು ತಂಡಗಳು ಶೀಘ್ರದಲ್ಲೇ ತಮ್ಮ ಸಮ್ಮತಿ ಸೂಚಿಸುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಭಾರತದ ಟೆನ್ನಿಸ್‌ ಜೋಡಿಗಳಾದ ಮಹೇಶ್‌ ಭೂಪತಿ ಮತ್ತು ಲಿಯಾಂಡರ್‌ ಪೇಸ್‌ ಅವರು ರದ್ದಾಗಿದ್ದ ಪಂದ್ಯಾವಳಿಯ ಪುನಾರಂಭಕ್ಕೆ ಎ.ಟಿ.ಪಿ. ಜೊತೆ ಮಾತುಕತೆ ನಡೆಸಿದ್ದರು.

2000ನೇ ಇಸವಿಯಲ್ಲಿ ಮೊದಲ ಪಂದ್ಯಾವಳಿಯನ್ನು ಪ್ರಾಯೋಜಿಸಿದ್ದ ಕೆಎಸ್‌ಎಲ್‌ಟಿಎಯು ಕಳೆದವರ್ಷ ಎರಡನೇ ಟೂರ್ನಿಯ ಪ್ರಾಯೋಜಕತ್ವ ವಹಿಸಬೇಕಿತ್ತು. ಆದರೆ, ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಆ ಅವಕಾಶ ಕೈತಪ್ಪಿತ್ತು. ಎ.ಟಿ.ಪಿ. ಕೂಡ ಆಟಗಾರರ ವಿಶ್ರಾಂತಿರಹಿತ ಕಾರ್ಯಕ್ರಮಪಟ್ಟಿಯ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನೇ ರದ್ದುಪಡಿಸಲು ಈ ಹಿಂದೆ ನಿರ್ಧರಿಸಿತ್ತು.

(ನಮ್ಮ ವಿಶೇಷ ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+