ಪ್ರೇಯಸಿಯ ಸಿಕ್ಸರ್‌ಗೆತ್ತಿದ ಲಾರಾ!
ಟ್ರಿನಿಡಾಡ್: ಲಾರಾ ಈಗ ಕೆಟ್ಟ ಫಾರ್ಮ್‌ನಿಂದ ಹೊರ ಬಂದಿದ್ದಾರೆ. 2001 ನೇ ಇಸವಿಯ ಕ್ರಿಕೆಟ್ ಋತುವಿನಲ್ಲಿ ಬರಿ ಟೆಸ್ಟ್ ಪಂದ್ಯಗಳಲ್ಲೇ 1 ಸಾವಿರ ರನ್‌ಗಳನ್ನು ಕಲೆ ಹಾಕಿದ್ದಾರೆ. ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಲಾರಾ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಲಾರಾ ಮಿಂಚಿನ ಆಟದಿಂದ ಅಭಿಮಾನಿಗಳು ಖುಷಿಯಾಗಿದ್ದರು. ಇದು ತುಸು ಬೇಜಾರಿನ ಸುದ್ದಿ - ಲಾರಾ ಮೈದಾನದಲ್ಲಿ ಆಟಗಾರರೊಂದಿಗೆ ಮಾತ್ರವಲ್ಲದೆ ಪ್ರೇಯಸಿಯಾಂದಿಗೂ ಕ್ರಿಕೆಟ್ ಆಡಲು ತೊಡಗಿದ್ದಾರೆ. ಪರಿಣಾಮ, ಆಕೆ ಸಿಟ್ಟಾಗಿದ್ದಾಳೆ.
20 ವರ್ಷ ವಯಸ್ಸಿನ ಬ್ರಿಟ್ ಲಿನ್ನೆಸಿ ವಾರ್ಡ್ 32 ವಯಸ್ಸಿನ ವಿಂಡಿಸ್ ತಂಡದ ಸ್ಟಾರ್ ಕ್ರಿಕೆಟಿಗ ಲಾರಾ ಪ್ರೇಯಸಿ. ಬ್ರಿಟ್ ಸುಂದರಿ ಎನ್ನುವುದನ್ನು ಅವಳ ಕಡು ಮಾಡೆಲಿಂಗ್ ಪ್ರತಿಸ್ಪರ್ಧಿಗಳೂ ಒಪ್ಪುತ್ತಾರೆ. ಬ್ರಿಟ್‌ಗೆ ಲಾರಾ ಕಂಡರೆ ತುಂಬಾನೆ ಪ್ರೀತಿ. ಲಾರಾಗೂ ಬ್ರಿಟ್ ಎಂದರೆ ಕ್ರಿಕೆಟ್‌ನಷ್ಟೇ ಇಷ್ಟ . ಜನುಮದ ಜೋಡಿಗಳಂತೆ ಇಬ್ಬರೂ ಸಾಕಷ್ಟು ಸುತ್ತಿದ್ದಾರೆ. ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾರೆ.
ಲಾರಾ ತನ್ನನ್ನು ಮನ ಬಂದಂತೆ ಚಚ್ಚಿದ ಎಂದು ಈಗ ಬ್ರಿಟ್ ದೂರಿದ್ದಾಳೆ. ಇದನ್ನು ಪ್ರೀತಿಯ ಇನ್ನೊಂದು ಮುಖ ಎಂದು ಸುಮ್ಮನಿರುವಂತಿಲ್ಲ . ಏಕೆಂದರೆ ಲಾರಾ ಪ್ರತಾಪದ ಕುರಿತು ಬ್ರಿಟ್ ಪೊಲೀಸರಿಗೆ ದೂರಿದ್ದಾಳೆ. ಕ್ರಿಸ್‌ಮಸ್ ಮರುದಿನ ಡಿ.26 ರಂದು ಲಾರಾ ತನ್ನ ಟ್ರಿನಿಡಾಡ್‌ನ ನಿವಾಸದಲ್ಲಿ ಅನೇಕ ಸಾರಿ ಹೊಡೆದ ಎಂದು ಬ್ರಿಟ್ ಹೇಳಿದ್ದಾಳೆ. ಏಟು ತಿಂದ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದಾಳೆ. ಈ ಕುರಿತು ಬ್ರಿಟನ್‌ನ ಟ್ಯಾಬ್ಲಾಯ್ಡ್ ದಿ ಸನ್ ವರದಿ ಮಾಡಿದೆ.
ಕ್ರಿಸ್‌ಮಸ್ ಕಿರಿಕಿರಿ
ಟ್ರಿನಿಡಾಡ್‌ನ ಕೆರೆಬಿಯನ್ ದ್ವೀಪದಲ್ಲಿರುವ ಲಾರಾನ ಲಕ್ಷುರಿ ಮ್ಯಾನ್ಷನ್‌ನಲ್ಲಿ ಕ್ರಿಸ್‌ಮಸ್ ಕಳೆಯಲೆಂದು ಬ್ರಿಟ್ ಆಗಮಿಸಿದ್ದಳು. ಇಬ್ಬರೂ ಪಾರ್ಟಿಗೂ ಹೋಗಿದ್ದರು. ಆದರೆ, ಸಣ್ಣ ಕಾರಣವೊಂದಕ್ಕೆ ಜಗಳ ಶುರುವಾಗಿದೆ. ಲಾರಾ ಚಚ್ಚಿದ್ದಾನೆ. ಪೊಲೀಸ್ ಅಧಿಕಾರಿ ಬ್ರಿಟಾನ್ ರಾಮೌತಾರ್ ಹೇಳುವಂತೆ- ನಾವು ಲಾರಾ ಮನೆಗೆ ಹೋದಾಗ ಬ್ರಿಟ್ ಅಪ್‌ಸೆಟ್ ಆಗಿದ್ದರು. ಆಕೆಯ ಮುಖದ ಮೇಲೆ ಗಾಯವಾಗಿತ್ತು .
ಕಳೆದ ದಿನಗಳಲ್ಲಿ ಲಾರಾ ಹಾಗೂ ಬ್ರಿಟ್ ಜೋಡಿ ತುಂಬಾ ಖುಷಿಯಿಂದ ಇದ್ದುದನ್ನು ಕಂಡವರಿದ್ದಾರೆ. ಇಬ್ಬರೂ ಮುತ್ತುಗಳ ವಿನಿಮಯ ಮಾಡಿಕೊಂಡಿರುವುದೂ ಉಂಟು. ಈಗ ಕೂಡ ಬ್ರಿಟ್‌ಗೆ ಲಾರಾ ಬಗ್ಗೆ ಪ್ರೀತಿ ಕುಗ್ಗಿಲ್ಲ . ಆತ ನನ್ನ ಹೀರೋ. ಈ ಜಗಳ ಪ್ರೇಮಿಗಳ ನಡುವಣ ಕಿತ್ತಾಟ ಅಷ್ಟೇ ಎನ್ನುತ್ತಾಳೆ.
ಲಾರಾ ಜೊತೆ ಎಂದೆಂದಿಗೂ ಇರಲು ನನಗಿಷ್ಟ . ಆತನನ್ನು ಮದುವೆಯಾಗಲು ಬಯಸುತ್ತೇನೆ. ಆದರೆ, ಸದ್ಯಕ್ಕೆ ಮಾಡೆಲಿಂಗ್‌ನತ್ತ ನನ್ನ ಸಂಪೂರ್ಣ ಗಮನ ಎಂದು ಬ್ರಿಟ್ ಸ್ಪಷ್ಟಪಡಿಸುತ್ತಾರೆ.
ಬ್ರಿಟ್ ಮೇಲಿನ ಲಾರಾ ಕೋಪ ಈಗ ತಣ್ಣಗಾಗಿದೆಯಾ ಎನ್ನುವುದು ತಿಳಿದುಬಂದಿಲ್ಲ . ಹೊಸ ವರ್ಷದಲ್ಲಿ ಪ್ರೇಯಸಿಯಾಂದಿಗೆ ಲಾರಾ ರಾಜಿಯಾಗಲಿ, ಅವರ ಕ್ರಿಕೆಟ್ ಮೈದಾನಕ್ಕಷ್ಟೇ ಸೀಮಿತವಾಗಿರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
(ಏಜೆನ್ಸೀಸ್)
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications