ಷೇರುಗೂಳಿ ಹರ್ಷದ್ ಮೆಹ್ತಾ ಹೃದಯಾಘಾತದಿಂದ ನಿಧನ
ಮುಂಬಯಿ : ಹತ್ತು ವರ್ಷಗಳ ಹಿಂದೆ ಬಹುಕೋಟಿ ಷೇರು ಹಗರಣ ಸೃಷ್ಟಿಸಿದ್ದ ಕುಪ್ರಸಿದ್ಧ ಬಿಗ್ ಬುಲ್ ಹರ್ಷದ್ ಮೆಹ್ತಾ ಸೋಮವಾರ ಮುಂಜಾನೆ ಇಲ್ಲಿನ ಥೇನ್ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾದರು.
ಭ್ರಷ್ಟಾಚಾರದ ಅನೇಕ ಹಗರಣಗಳಲ್ಲಿ ಆರೋಪಿಯಾಗಿದ್ದ ಹರ್ಷದ್, ಥೇನ್ ಸೆಂಟ್ರಲ್ ಜೈಲ್‌ನಲ್ಲಿದ್ದರು. ಭಾನುವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಅವರು ನಿಧನರಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ 9ರಂದು ಇಬ್ಬರು ಸಹೋದರರ ಸಹಿತ ಹರ್ಷದ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. 90 ಬ್ಲೂ ಚಿಪ್ ಕಂಪೆನಿಗಳ ಷೇರು ಅವ್ಯವಹಾರದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್ 21ರ ವಿಚಾರಣೆಯಲ್ಲಿ ಜಾಮೀನು ನೀಡಲು ನಿರಾಕರಿಸಿ ಅವರನ್ನು ಜನವರಿ 4ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ವಿಶೇಷ ಕೋರ್ಟ್ ಆದೇಶಿಸಿತ್ತು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications