ಮೈಸೂರಿನಲ್ಲಿ ವಿಶೇಷ ಬಸ್, ಹಿರಿಯ ನಾಗರಿಕರಿಗಾಗಿ ಮಾತ್ರ!
ಮೈಸೂರು : ನಿವೃತ್ತರ ಸ್ವರ್ಗ ಎಂದೇ ಹೆಸರಾಗಿರುವ ಮೈಸೂರು ನಗರಿಯಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷ ಬಸ್ ಸಂಚಾರ ಇತ್ತೀಚೆಗೆ ಶುರುವಾಗಿದೆ.
ನಗರ ಬಸ್ ನಿಲ್ದಾಣ ಹಾಗೂ ವಿವೇಕಾನಂದನಗರದ ನಡುವೆ (ಬಸ್ ನಂಬರ್ 94) ಈ ವಿಶೇಷ ಬಸ್ಸನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಓಡಿಸುತ್ತಿದೆ. 38 ಮಂದಿಗೆ ಕೂರಲು ಅವಕಾಶವಿರುವ ಈ ಬಸ್ಸಿನ ಎತ್ತರ ನೆಲಮಟ್ಟದಿಂದ ತೀರಾ ಕಡಿಮೆ. ಹಿರಿಯ ನಾಗರಿಕರಿಗೆ ಹತ್ತಲು ಮತ್ತು ಇಳಿಯಲು ಸುಲಭ.
ಮಧ್ಯ ಭಾಗದಲ್ಲಿ ಬಾಗಿಲಿದ್ದು, ಅದನ್ನು ರಿಮೋಟ್ ಕಂಟ್ರೋಲ್‌ನಿಂದ ತೆರೆದು, ಮುಚ್ಚಿ ಮಾಡಬಹುದು. ಮೂರು ತಿಂಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಸಿ, ನಂತರ ಇದನ್ನು ಬೇರೆ ಮಾರ್ಗಗಳಿಗೂ ವಿಸ್ತರಿಸುವ ಬಗೆಗೆ ಚಿಂತಿಸಲಾಗುವುದು ಎಂದು ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ರಂಗಣ್ಣೇ ಗೌಡ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications