ಕುವೆಂಪು ವಿವಿಯಲ್ಲಿ ಕುವೆಂಪು-ಗೋಪಾಲಗೌಡ ಅಧ್ಯಯನಪೀಠ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ದೃಷ್ಠಿಯಿಂದ ಮೂರು ಹೊಸ ಅಧ್ಯಯನ ಪೀಠಗಳನ್ನು ಆರಂಭಿಸಲಾಗುವುದು.

ವೀರಶೈವ ಅಧ್ಯಯನ ಪೀಠ, ಕುವೆಂಪು ಅಧ್ಯಯನ ಪೀಠ ಹಾಗೂ ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠವನ್ನು ಆರಂಭಿಸಲಾಗುವುದು ಎಂದು ವಿಶ್ವ ವಿದ್ಯಾಲಯದ ಉಪ ಕುಲಪತಿ ಎಸ್‌. ಪಿ. ಹೀರೇಮಠ ತಿಳಿಸಿದ್ದಾರೆ. ಅವರು ಶನಿವಾರ ವಿವಿಯ ಶಿಕ್ಷಣ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ, ಸರಕಾರ ಮತ್ತು ಆದಿಚುಂಚನಗಿರಿ ಮಠದಿಂದ ಈ ಅಧ್ಯಯನ ಪೀಠಗಳಿಗಾಗಿ ಈಗಾಗಲೇ ತಲಾ 10 ಲಕ್ಷ ರೂಪಾಯಿ ದೇಣಿಗೆ ದೊರೆತಿದೆ.

ವೀರಶೈವ ಅಧ್ಯಯನ ಪೀಠವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ. ಆದರೆ ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠ ರಾಜ್ಯಶಾಸ್ತ್ರ ವಿಭಾಗಕ್ಕೆ ಹಾಗೂ ಕುವೆಂಪು ಅಧ್ಯಯನ ಪೀಠ ಕನ್ನಡ ವಿಭಾಗಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+