ಗೃಹಬಳಕೆ ನೀರಿನ ದರ ಏರಿಕೆಯಲ್ಲಿ ಕೊಂಚ ರಿಯಾಯಿತಿ

ಬೆಂಗಳೂರು : ಬೆಂಗಳೂರು ನಗರ ನೀರು ಬಳಕೆದಾರರು ಮತ್ತು ಜಲಮಂಡಳಿ ಇಬ್ಬರಿಗೂ ಬೇಸರ ಆಗದಂತೆ ವೈಜ್ಞಾನಿಕವಾಗಿ ನೀರಿನ ದರ ನಿರ್ಧರಣೆ ಮಾಡುವ ಹೊಣೆ ಹೊತ್ತಿದ್ದ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಶನಿವಾರ ಹೊಸ ನೀರಿನ ದರಗಳನ್ನು ಪ್ರಕಟಿಸಿದ್ದಾರೆ.

ಡಿಸೆಂಬರ್‌ 1ರಿಂದ ಪೂರ್ವಾನ್ವಯವಾಗುವಂತೆ ಇತ್ತೀಚೆಗೆ ಬೆಂಗಳೂರು ಜಲಮಂಡಳಿ ಏರಿಸಿದ್ದ ದರದಲ್ಲಿ ಗೃಹಬಳಕೆಯ ನೀರಿನ ದರ ಏರಿಕೆಗೆ ಕೊಂಚ ರಿಯಾಯಿತಿ ನೀಡಲಾಗಿದೆ. ಆದರೆ, ವಾಣಿಜ್ಯ ಉದ್ದೇಶದ ನೀರಿನ ದರ ಏರಿಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ರಾಜಕೀಯ ಪಕ್ಷಗಳ ಹಾಗೂ ಬೆಂಗಳೂರು ನಗರ ವಾಸಿಗಳ ಒತ್ತಾಯಕ್ಕೆ ಮಣಿದ ಸರಕಾರ ಮಂಡಳಿ ಏರಿಸಿದ್ದ ಗೃಹಬಳಕೆ ನೀರಿನ ದರದಲ್ಲಿ ಸ್ವಲ್ಪ ಕಡಿಮೆ ಮಾಡಿದೆ. ಅದರಂತೆ 0-15 ಸಾವಿರ ಲೀಟರ್‌ವರೆಗೆ ನೀರು ಬಳಸುವ ಬಳಕೆದಾರರು ಪ್ರತಿ ಕಿಲೋ ಲೀಟರ್‌ಗೆ 6 ರುಪಾಯಿಗೆ ಬದಲಾಗಿ 5 ರುಪಾಯಿ ತೆರಬೇಕಾಗುತ್ತದೆ. 70 ರುಪಾಯಿಯಿದ 118 ರುಪಾಯಿಗಳಿಗೆ ಏರಿಸಲಾಗಿದ್ದ ಕನಿಷ್ಠ ದರದಲ್ಲೂ ಕಡಿತ ಮಾಡಲಾಗಿದೆ.

ಒಳಚರಂಡಿ ಶುಲ್ಕವನ್ನು 20 ರುಪಾಯಿ ಬದಲಾಗಿ 15 ರುಪಾಯಿಗೆ ಇಳಿಸಲಾಗಿದೆ. ಮೀಟರ್‌ ಬಾಡಿಗೆಯನ್ನೂ ಕಡಿಮೆ ಮಾಡಿ, ಒಟ್ಟು ಕನಿಷ್ಠ ದರವನ್ನು 118 ರುಪಾಯಿಂದ ನೂರು ರುಪಾಯಿಗೆ ನಿಗದಿ ಮಾಡಲಾಗಿದೆ. 15 ಸಾವಿರದಿಂದ 25 ಸಾವಿರ ಲೀಟರ್‌ ಬಳಸುವ ಗ್ರಾಹಕರಿಗೆ ಕಿಲೋ ಲೀಟರ್‌ಗೆ 10 ರುಪಾಯಿಗೆ ಬದಲಾಗಿ 6.50 ರುಪಾಯಿ ವಿಧಿಸಲಾಗುವುದು. ಸ್ಯಾನಿಟರಿ ದರ ಈ ಹಂತಕ್ಕೂ 15 ರುಪಾಯಿ ನಿಗದಿ ಮಾಡಲಾಗಿದೆ ಎಂದು ಪ್ರೊ. ಬಿಕೆಸಿ ತಿಳಿಸಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+