Get Updates
Get notified of breaking news, exclusive insights, and must-see stories!

ಒರ್ಲಾಂಡ್‌ ಹಿಂದೂ ವಿವಿಯಿಂದ ಬೆಂಗಳೂರಲ್ಲಿ ಯೋಗ ಶಿಕ್ಷಣ

ಬೆಂಗಳೂರು : ನಗರದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ(ಎಸ್‌ವಿವೈಎಎಸ್‌)ದಲ್ಲಿ ಒರ್ಲಾಂಡ್‌ ಮೂಲದ ಹಿಂದೂ ಯೂನಿವರ್ಸಿಟಿ ಆಫ್‌ ಅಮೆರಿಕಾ ಯೋಗ ಶಿಕ್ಷಣ ಸ್ನಾತಕೋತ್ತರ ಪದವಿ ಮತ್ತು ಉನ್ನತ ಅಧ್ಯಯನ ಕೇಂದ್ರವನ್ನು ಆರಂಭಿಸಿದೆ.

ನಗರದಿಂದ 32 ಕಿ.ಮೀ ದೂರದ ಪ್ರಶಾಂತಿ ಕುಟೀರಂನಲ್ಲಿರುವ ಈ ಅಧ್ಯಯನ ಕೇಂದ್ರವನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಚಂದ್ರಶೇಖರ್‌ ಶೆಟ್ಟಿ ಇತ್ತೀಚೆಗೆ ಉದ್ಘಾಟಿಸಿದರು. ಈ ಶಿಕ್ಷಣ ಸಂಸ್ಥೆಯಲ್ಲಿ ಯೋಗ, ಧ್ಯಾನ ಮತ್ತು ತತ್ವಶಾಸ್ತ್ರದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕಲಿಕೆ, ಮತ್ತು ಉನ್ನತ ಅಧ್ಯಯನ ಅವಕಾಶವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು.

ಯೋಗ ಶಿಕ್ಷಣದಲ್ಲಿ ಆಳವಾದ ಅಧ್ಯಯನ ಅವಕಾಶವನ್ನು ಒದಗಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ. ಈ ಅಧ್ಯಯನ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುವವರು ಸಂಪರ್ಕಿಸಬೇಕಾದ ವಿಳಾಸ: ಯೋಗ ಶಿಕ್ಷಣ ಕೇಂದ್ರ, 9, ಅಪ್ಪಾಜಪ್ಪ ಅಗ್ರಹಾರ, ಚಾಮರಾಜಪೇಟೆ, ಬೆಂಗಳೂರು , 560 018. ವೆಬ್‌ ಸೈಟ್‌: www.svyasa.org ಫೋನ್‌: (080)6612669.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+