ದೆಹಲಿ ಪೊಲೀಸರಿಂದ ಪಾಕಿಸ್ತಾನದ ಮತ್ತೊಬ್ಬ ಸ್ಪೈ ಬಂಧನ
ನವದೆಹಲಿ : ಪಾಕಿಸ್ತಾನದ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಒದಗಿಸುತ್ತಿದ್ದ ಮತ್ತೊಬ್ಬನನ್ನು ಕ್ರಿಸ್‌ಮಸ್ ದಿನ ಸಂಜೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರದ ಸಮೀಉದ್ದೀನ್ ಎಂಬಾತನೇ ಬಂಧಿತ. ಮಂಗಳವಾರ ಸಂಜೆ ದರಿಯಾಗಂಗ್‌ನಲ್ಲಿ ಪಾಕಿಸ್ತಾನಕ್ಕೆ ಐಎಸ್‌ಡಿ ಕರೆ ಮಾಡುತ್ತಿದ್ದಾಗ ಈತನನ್ನು ಕೇಂದ್ರ ದೆಹಲಿಯ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ. ದೂರವಾಣಿ ಮೂಲಕ ಈತ ಲಾಹೋರಿನಲ್ಲಿರುವ ಐಎಸ್‌ಐ ಅಧಿಕಾರಿ ಜತೆ ಮಾತಾಡುತ್ತಿದ್ದ ಹಾಗೂ ಭಾರತೀಯ ಮಿಲಿಟರಿಯ ಮಹತ್ತರ ದಾಖಲೆಗಳನ್ನು ಸದ್ಯದಲ್ಲೇ ಒದಗಿಸುವವನಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಚೇರಿ ಗೌಪ್ಯ ಕಾಯ್ದೆ (ಅಫಿಶಿಯಲ್ ಸೀಕ್ರೇಟ್ಸ್ ಆ್ಯಕ್ಟ್) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನಕ್ಕೆ ಭಾರತದ ಮಾಹಿತಿ ಒದಗಿಸಲು ಯತ್ನಿಸಿ, ಬಂಧನಕ್ಕೊಳಗಾಗಿರುವ ಎರಡನೆಯವ ಈತ. ಈ ಮೊದಲು ಪಾಕಿಸ್ತಾನದ ಹೈಮಿಷನ್ ಸಿಬ್ಬಂದಿಗೆ ಸೂಕ್ಷ್ಮ ದಾಖಲೆಗಳನ್ನು ಕೊಡುವ ಸಂದರ್ಭದಲ್ಲಿ
ಸಂಸತ್ತಿನ ನೌಕರ ಅಜಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications