ಮಲ್ಪೆ : ತಲೆ ಕೆಳಗಾದ ದೋಣಿ, ಓರ್ವ ಮೀನುಗಾರ ಕಡಲಪಾಲು
ಮಣಿಪಾಲ: ದೋಣಿಯಾಂದು ತಲೆ ಕೆಳಗಾದ ಪರಿಣಾಮ ಓರ್ವ ಮೀನುಗಾರ ಕಡಲಪಾಲಾದ ದುರ್ಘಟನೆ ಮಲ್ಪೆಗೆ 9 ಕಿಮೀ ದೂರದಲ್ಲಿ ಸಂಭವಿಸಿದೆ. ಮಂಗಳವಾರ ರಾತ್ರಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಪೆ ಬಂದರಿನ ಸಮೀಪ ಐದು ಮಂದಿ ಮೀನುಗಾರರ ತಂಡ ಕಡಲಿಗಿಳಿದಿದ್ದು, ದೋಣಿ ತಲೆ ಕೆಳಗಾದಾಗ ಓರ್ವ ಸಮುದ್ರದ ಪಾಲಾಗಿದ್ದಾನೆ. ಉಳಿದ ನಾಲ್ವರು ಪ್ರಯಾಸದಿಂದ ಈಜಿಕೊಂಡು ದಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಲಪಾಲಾದ ಮೀನುಗಾರನ ದೇಹ ಇನ್ನೂ ಪತ್ತೆಯಾಗಿಲ್ಲ .
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications