ಶನಿವಾರ ಹಾಗೂ ಭಾನುವಾರ ರಾಜ್ಯದ ಆಸ್ಪತ್ರೆಗಳು ಬಂದ್
ಬೆಂಗಳೂರು : ಡಿಸೆಂಬರ್ 22 ಮತ್ತು 23ರಂದು ನಿಮ್ಮ ಆರೋಗ್ಯ ಕೆಡದಿರಲಿ. ಅಂಥಾ ಸೂಚನೆಗಳೇನಾದರೂ ಇದ್ದಲ್ಲಿ ಶುಕ್ರವಾರವೇ ವೈದ್ಯರನ್ನು ಕಂಡುಬಿಡಿ. ಯಾಕೆಂದರೆ, ಶನಿವಾರ ಹಾಗೂ ಭಾನುವಾರ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಬಂದ್ !
ವೈದ್ಯಕೀಯ ಸಂಸ್ಥೆಗಳ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಭಾರತೀಯ ವೈದ್ಯಕೀಯ ಒಕ್ಕೂಟದ ಕರ್ನಾಟಕ ಶಾಖೆ ಬಂದ್‌ಗೆ ಕರೆ ನೀಡಿದೆ. ಕರ್ನಾಟಕ ರಾಜ್ಯ ಕಿರಿಯ ವೈದ್ಯರ ಒಕ್ಕೂಟ ಕೂಡ ಮುಷ್ಕರವನ್ನು ಬೆಂಬಲಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಜಿ.ವಿಜಯ ಕುಮಾರ್ ಹೇಳಿದ್ದಾರೆ. ಮುಷ್ಕರದ ವೇಳೆ ತುರ್ತು ಮತ್ತು ಶವ ಪರೀಕ್ಷೆ ಸೇವೆಗಳನ್ನು ಮಾತ್ರ ಒದಗಿಸಲು ವೈದ್ಯರು ನಿರ್ಧರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications