ಮಾರ್ಚ್ 21ರಿಂದ ಏಪ್ರಿಲ್ 1ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ
ಬೆಂಗಳೂರು : 2002ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಆರಂಭವಾಗಲಿವೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ವೇಳಾಪಟ್ಟಿ ರೀತ್ಯ ಮಾರ್ಚ್ 21ರಂದು ಪ್ರಥಮ ಭಾಷೆ, ಮಾ. 22 - ಗಣಿತ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ಸಮಾಜಶಾಸ್ತ್ರ, ಮಾ. 26ರಂದು ವಿಜ್ಞಾನ ಪ್ರಥಮ ಮತ್ತು ದ್ವಿತೀಯ, ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ.
ಮಾರ್ಚ್ 27ರಂದು ದ್ವಿತೀಯ ಭಾಷೆ, ಮಾ.28ರಂದು ಸಮಾಜ ವಿಜ್ಞಾನ, ಮಾ.30ರಂದು ಜೆ.ಟಿ.ಎಸ್ 1 ಮತ್ತು 2, ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ಅರ್ಥಶಾಸ್ತ್ರ. ಏರ್ಪಿಲ್ 1ರಂದು ತೃತಿಯ ಭಾಷೆ ಪತ್ರಿಕೆಗಳ ಪರೀಕ್ಷೆ ನಡೆಯಲಿದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications