ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ 130 ಕೋಟಿ ರು. ಸಬ್ಸಿಡಿ
ಹುಬ್ಬಳ್ಳಿ : ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ 130 ಕೋಟಿ ರುಪಾಯಿ ಸಬ್ಸಿಡಿಯನ್ನು ಬಿಡುಗಡೆ ಮಾಡುವುದಾಗಿ ಸಣ್ಣ ಪ್ರಮಾಣದ ಕೈಗಾರಿಕಾ ಸಚಿವ ಎಸ್.ಆರ್.ಕಾಶಪ್ಪನವರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಡನೆ ಅವರು ಮಾತಾಡುತ್ತಿದ್ದರು. ಸರ್ಕಾರ ಜಾರಿಗೆ ತರುತ್ತಿರುವ ಹೊಸ ಕೈಗಾರಿಕಾ ನೀತಿಯಲ್ಲಿ ತಾಂತ್ರಿಕ ಅಭಿವೃದ್ಧಿ, ಪ್ರಾಥಮಿಕ ಸೌಕರ್ಯಗಳು, ಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಆದ್ಯತೆ ಕೊಡಲಾಗುವುದು. ಇದರಿಂದ ಸೊರಗುತ್ತಿರುವ ಸಣ್ಣ ಪ್ರಮಾಣದ ಉದ್ದಿಮೆಗಳ ಸ್ಥಿತಿ ಸಾಕಷ್ಟು ಸುಧಾರಿಸುವ ಭರವಸೆಯಿದೆ ಎಂದು ಕಾಶಪ್ಪನವರ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications