ಅತ್ಯಾಧುನಿಕ ತಂತ್ರಜ್ಞಾನ ಕಂಪನಿಗಳ ಮುಂದಾಳಾಗಿ ಇನ್ಫೋಸಿಸ್
ನವದೆಹಲಿ : ಭಾರತದ ಅತ್ಯಾಧುನಿಕ ತಂತ್ರಜ್ಞಾನ ಕಂಪನಿಗಳ ಪೈಕಿ ಸರ್ವಾಂಗೀಣ ನಾಯಕತ್ವ ಗೌರವ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್‌ನ ಪಾಲಾಗಿದೆ.
ಏಷ್ಯಾದ ಪ್ರಮುಖ ಕಂಪನಿಗಳ ಕುರಿತು ಈಸ್ಟ್ರನ್ ಎಕನಾಮಿಕ್ಸ್ ನಡೆಸಿರುವ ‘ರಿವ್ಯೂ 2000- ಏಷ್ಯಾ’ ವಿಭಾಗದಲ್ಲಿ ಇನ್ಫೋಸಿಸ್ ಮೊದಲ ಸ್ಥಾನ ಪಡೆದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ವಿಪ್ರೋ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ.
ಹೀರೋ ಹೊಂಡಾ, ಡಾ. ರೆಡ್ಡೀಸ್ ಲ್ಯಾಬ್ ಮತ್ತು ಲಾರ್ಸನ್ ಅಂಡ್ ಟ್ಯೂಬ್ರೊ ಆನಂತರದ ಸ್ಥಾನಗಳನ್ನು ಹಂಚಿಕೊಂಡಿವೆ. ವಿಶ್ವದಾದ್ಯಂತ ಮಾಹಿತಿ ತಂತ್ರಜ್ಞಾನ ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದರೂ ಇನ್ಫೋಸಿಸ್ ಹಾಗೂ ವಿಪ್ರೋ ತಮ್ಮ ಯಶಸ್ಸಿನ ನಾಗಾಲೋಟ ಮುಂದುವರಿಸಿರುವುದು ಗಮನಾರ್ಹ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications