ಅಂತರ್ಜಾಲದ ಅಂಗಳಕ್ಕೆ ಐತಿಹಾಸಿಕ ಹಿನ್ನೆಲೆಯ ರಾಜಭವನ
ಬೆಂಗಳೂರು : ರಾಜಭವನದ ಐತಿಹಾಸಿಕ ಹಿನ್ನೆಲೆಯನ್ನು ಪರಿಚಯಿಸುವ http://nitpu3.kar.nic.in/rajbhavan/ ವೆಬ್‌ಸೈಟನ್ನು ರಾಜ್ಯಪಾಲೆ ವಿ.ಎಸ್.ರಮಾದೇವಿ ಬುಧವಾರ ಉದ್ಘಾಟಿಸುವುದರೊಂದಿಗೆ ರಾಜಭವನದ ವೆಬ್‌ಸೈಟ್ ಹೊಂದಿರುವ ಪ್ರಥಮ ರಾಜ್ಯ ಎನ್ನುವ ಅಗ್ಗಳಿಕೆಗೆ ಕರ್ನಾಟಕ ಪಾತ್ರವಾಯಿತು.
ರಾಜಭವನದಲ್ಲಿನ ಕಲಾಕೃತಿಗಳು, ಉದ್ಯಾನವನ, ಛಾಯಾಚಿತ್ರಗಳು, ಹೂ ತೋಟ, ಹಿಂದಿನ ಹಾಗೂ ಪ್ರಸ್ತುತ ರಾಜ್ಯಪಾಲರ ಪರಿಚಯ, ರಾಜಭವನಕ್ಕೆ ಭೇಟಿ ಕೊಟ್ಟ ಗಣ್ಯರ ಫೋಟೋಗಳನ್ನು ಹೊಂದಿರುವ ಫೋಟೋ ಗ್ಯಾಲರಿಯನ್ನು ವೆಬ್‌ಸೈಟ್ ಹೊಂದಿದೆ.
ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ರಾಜಭವನ ವೆಬ್‌ಸೈಟ್‌ನ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ.ಚಂದ್ರಶೇಖರ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ಮಾಲತಿ ದಾಸ್, ವೆಬ್‌ಸೈಟ್ ವಿನ್ಯಾಸಗೊಳಿಸಿರುವ ಫೊರ್ಸಿ ಮಲ್ಟಿ ಮೀಡಿಯದ ನಿರ್ದೇಶಕ ಬಾಲಚಂದ್ರ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications