ನಕಲಿ ಪಾಸ್‌ಪೋರ್ಟ್‌ ಜಾಲ ಬಯಲು ; ಮೂವರ ಬಂಧನ

ಬೆಂಗಳೂರು: ವಿಮಾನ ನಿಲ್ದಾಣದ ಪೊಲೀಸ್‌ ಅಧಿಕಾರಿಗಳ ಸಹಕಾರದೊಂದಿಗೆ ನಕಲಿ ಪಾಸ್‌ಪೋರ್ಟ್‌ ಸಿದ್ಧಪಡಿಸುತ್ತಿದ್ದ ಮೂವರು ಏಜೆಂಟರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೇನಾಮಿ ಹೆಸರುಗಳ ನಕಲಿ ಪಾಸ್‌ಪೋರ್ಟ್‌ ಉಪಯೋಗಿಸಿ ವಿದೇಶಗಳಿಗೆ ತೆರಳುವವರ ಬಗ್ಗೆ ರಹಸ್ಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ನಕಲಿ ಪಾಸ್‌ಪೋರ್ಟ್‌ ಜಾಲ ಬಯಲಾಗಿದೆ. ಗುಜರಾತ್‌ನ ಮೆಹಸನ ಜಿಲ್ಲೆಯ ಬಾಬುಬಾಯಿ ಪಟೇಲ್‌ (45), ಎ.ಜಾನ್‌ ಅಲಿಯಾಸ್‌ ರವಿ (43), ಮಾಣಿಕ್ಯಂ (40) ಹಾಗೂ ಅನುಕಪೂರ್‌ ರಾಜ್‌ (43) ಬಂಧಿತರಾಗಿದ್ದು, ಇವರು ವಿಮಾನ ನಿಲ್ದಾಣದ ವಿದೇಶ ಯಾನ ಪರಿಶೀಲನಾ ಘಟಕದ ಮೂವರು ಪೊಲೀಸ್‌ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಪಾಸ್‌ಪೋರ್ಟ್‌ ಸಿದ್ಧಪಡಿಸುತ್ತಿದ್ದರು.

ಇಬ್ಬರು ಇನ್ಸ್‌ಪೆಕ್ಟರ್‌ ಹಾಗೂ ಒಬ್ಬ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಜಾಲದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ವಿಚಾರಣೆ ಮುಂದುವರಿಯುವುದು ಎಂದು ಹಗರಣದ ಬಗ್ಗೆ ಬೆಂಗಳೂರು ಮಹಾನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ. ಸಾಂಗ್ಲಿಯಾನ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+