ಮೊಬೈಲಿನಿಂದ ಮೊಬೈಲಿಗೆ ಕರೆ : ಜ.26ರಿಂದ ದರ ಅರ್ಧದಷ್ಟು ಅಗ್ಗ
ನವದೆಹಲಿ : ಮೊಬೈಲ್‌ನಿಂದ ಮೊಬೈಲಿಗೆ ಫೋನಾಯಿಸುವ ದರದಲ್ಲಿ ಪ್ರತಿಶತ 50ರಷ್ಟು ಕಡಿತ. ಇದು ಖಾಸಗಿ ಸೆಲ್ಯುಲರ್ ನಿರ್ವಾಹಕರ ಮುಂದಿನ ವರ್ಷದ ಗಣ ರಾಜ್ಯೋತ್ಸವದ ಕೊಡುಗೆ.
ಜನವರಿ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಇದರನ್ವಯ...
ರಾತ್ರಿ ವೇಳೆಯಲ್ಲಿ ಎಸ್‌ಟಿಡಿ ದರ- ನಿಮಿಷಕ್ಕೆ 6 ರುಪಾಯಿ, ಪ್ರಾದೇಶಿಕ- ನಿಮಿಷಕ್ಕೆ 3 ರುಪಾಯಿ.
ಮುಂಜಾನೆ 9 ರಿಂದ ರಾತ್ರಿ 9 ಗಂಟೆವರೆಗೆ- ರಾಷ್ಟ್ರೀಯ ಕರೆಗ ಳಿಗೆ ನಿಮಿಷಕ್ಕೆ 12 ರುಪಾಯಿ. ಪ್ರಾದೇಶಿಕ ಕರೆಗಳಿಗೆ- ನಿಮಿಷಕ್ಕೆ 6 ರು.
50 ಕಿ.ಮೀ.ನಿಂದ 200 ಕಿ.ಮೀ. ವ್ಯಾಪ್ತಿಯ ಸ್ಥಳೀಯ ಕರೆಗಳಿಗೆ- ನಿಮಿಷಕ್ಕೆ 2.40 ರು. (ಎಲ್ಲಾ ವೇಳೆಯಲ್ಲಿ).
ಭಾರತಿ ಟೆಲಿಸೋನಿಕ್ ಸೋಮವಾರ ಪ್ರಾರಂಭಿಸಿದ ಇಂಡಿಯಾ ಒನ್ ಎಂಬ ಎಸ್‌ಟಿಡಿ ಸೇವೆಗಳು ಮತ್ತು ರಿಯಾಯಿತಿ ಕೊಡುಗೆಗಳನ್ನು ಹಬಿಸೋನ್, ಏರ್‌ಟೆಲ್, ಎಸ್ಕೋಟೆಲ್, ಸ್ಪೈಸ್, ಬಿಪಿಎಲ್ ಮೊಬೈಲ್, ಕೋಶಿಕಾ ಹಾಗೂ ಎಟಿ ಅಂಡ್ ಟಿ ಗ್ರಾಹಕರೊಡನೆ ಹಂಚಿಕೊಳ್ಳುವ ಸಲುವಾಗಿ ರಿಯಾಯಿತಿ ಘೋಷಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications