ಭಾರತ- ಇಂಗ್ಲೆಂಡ್ ಬೆಂಗಳೂರು ಟೆಸ್ಟ್‌ಗೆ ವೆಬ್‌ಸೈಟ್‌ನಲ್ಲಿ ಟಿಕೆಟ್
ಬೆಂಗಳೂರು : ಭಾರತ ಮತ್ತು ಇಂಗ್ಲೆಂಡ್ ನಡುವೆ ನಗರದಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಟಿಕೆಟ್‌ಗಳು ವೆಬ್‌ಸೈಟಿನಲ್ಲೇ ಲಭ್ಯ.
ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟ (ಕೆಎಸ್‌ಸಿಎ) ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಟಿಕೇಟ್ ನೀಡಿಕೆ ವ್ಯವಸ್ಥೆಯನ್ನು ಮಾಡಿದೆ. ಒಕ್ಕೂಟದ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಹೇಳುವಂತೆ ಈಗಾಗಲೇ ಒಂದು ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಈ ಟೆಸ್ಟ್ ಪಂದ್ಯ ನೋಡಲು ಅಂಥಾ ನೂಕುನುಗ್ಗಲೇನೂ ಇಲ್ಲ. ಒಂದು ದಿನದ ಪಂದ್ಯಗಳ ಸಡಗರ ಇದಕ್ಕಿರುವುದಿಲ್ಲ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 42 ಸಾವಿರ ಮಂದಿ ಕ್ರಿಕೆಟ್ ನೋಡಬಹುದು. ಆದರೆ 12ರಿಂದ 15 ಸಾವಿರ ಟಿಕೆಟ್‌ಗಳು ಮಾತ್ರ ಮಾರಾಟಕ್ಕಿವೆ. ಉಳಿದವುಗಳನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ವಿತರಿಸಲಾಗುವುದು. ಈ ಆನ್‌ಲೈನ್ ಮೂಲಕ ಟಿಕೆಟ್ ಮಾರುವ ಸವಲತ್ತನ್ನು ಮುಂದೆ ನಡೆಯುವ ಪಂದ್ಯಗಳಲ್ಲೂ ಮುಂದುವರೆಸಲಾಗುವುದು ಎಂದು ಪಟೇಲ್ ಹೇಳಿದರು. ಟಿಕೇಟ್ ಬುಕ್ ಮಾಡಲು ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications