ಅಮೆರಿಕಾಗೆ ಭಾರತೀಯ ಜೀವ ನಿಗಮ ; ಮುಂದಿನ ಗುರಿ ಆಸ್ಟ್ರೇಲಿಯಾ
ಬೆಂಗಳೂರು : ಅಮೆರಿಕಾ ಮಾರುಕಟ್ಟೆಯನ್ನು ಪ್ರವೇಶಿಸಲು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪ್ರಯತ್ನಗಳನ್ನು ನಡೆಸುತ್ತಿದ್ದು , ಮುಂದಿನ 5 ವರ್ಷಗಳಲ್ಲಿ ತನ್ನ ಒಟ್ಟು ವಹಿವಾಟಿನಲ್ಲಿ ಶೇ.10 ರಷ್ಟನ್ನು ಭಾರತದಾಚೆ ನಡೆಸಲು ಉದ್ದೇಶಿಸಿದೆ.
ಕ್ಯಾಲಿಫೋರ್ನಿಯಾ ಹಾಗೂ ನ್ಯೂಯಾರ್ಕ್‌ಗಳಲ್ಲಿ ಎಲ್‌ಐಸಿ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡುತ್ತದೆ. ಈ ಪ್ರಸ್ತಾವನೆಯನ್ನು ಭಾರತೀಯ ಜೀವ ವಿಮಾ ನಿಗಮ ಈಗಾಗಲೇ ಅಂತಿಮಗೊಳಿಸಿದೆ ಎಂದು ನಿಗಮದ ಅಧ್ಯಕ್ಷ ಜಿ.ಎನ್.ಬಾಜಪೇಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕಾ ನಂತರ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಕೆನಡಾಗಳಲ್ಲೂ ತನ್ನ ಚಟುವಟಿಕೆ ವಿಸ್ತರಿಸಲು ಎಲ್‌ಐಸಿ ಉದ್ದೇಶಿಸಿದೆ. ಬ್ರಿಟನ್‌ನಲ್ಲಿನ ಚಟುವಟಿಕೆಗಳನ್ನು ಪುನರ್ ವ್ಯವಸ್ಥೆಗೊಳಿಸಲು ನಿಗಮ ಯೋಜಿಸಿದೆ. ಇಡೀ ಯುರೋಪ್ ಮಾರುಕಟ್ಟೆಯನ್ನು ತಲುಪುವ ಗುರಿಯನ್ನು ನಿಗಮ ಹೊಂದಿದೆ. ನೇಪಾಳದಲ್ಲಿ ಕಾರ್ಯಾರಂಭ ಮಾಡಿರುವ ಎಲ್‌ಐಸಿ ಈಗಾಗಲೇ 1000 ಪಾಲಿಸಿದಾರರನ್ನು ಹೊಂದಿದೆ ಎಂದು ಬಾಜಪೇಯಿ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications