ಸದ್ಯದಲ್ಲೇ ಚಿಕ್ಕಮಗಳೂರಿನಲ್ಲಿ ಮಿನಿ ಸಚಿವ ಸಂಪುಟ ಸಭೆ
ಚಿಕ್ಕ ಮಗಳೂರು : ಇಲ್ಲಿನ ಗಿರಿಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಿನಿ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿರ್ಧರಿಸಿದ್ದಾರೆ.
ಈ ವಿಷಯವನ್ನು ಸಮಾಜ ಕಲ್ಯಾಣ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ತಿಳಿಸಿದರು. ಅವರು ಮೂಡಿಗೆರೆಯಲ್ಲಿ ಮಾದರಿ ಗಿರಿಜನ ವಸತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಿನಿ ಸಚಿವ ಸಂಪುಟ ಸಭೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ . ಮನೆ ಇಲ್ಲದವರಿಗೆ ಮನೆ ನೀಡಿಕೆ, ಅರಣ್ಯ ಜಮೀನಿನಲ್ಲಿ ಕಟ್ಟಿರುವ ಮನೆಗಳ ಸಕ್ರಮ ಸೇರಿದಂತೆ ಗಿರಿಜನರ ಇತರ ಸಮಸ್ಯೆಗಳನ್ನು ಮಿನಿ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದರು.
ಮಲೆನಾಡ ಪ್ರದೇಶ ಅಮೂಲ್ಯ ನೈಸರ್ಗಿಕ ಮತ್ತು ಇತರ ವಾಣಿಜ್ಯ ಸಂಪತನ್ನು ಹೊಂದಿದೆ. ಇಲ್ಲಿನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆಂಬ ಬೇಡಿಕೆಗೆ ತಮ್ಮ ಸಹಮತವಿದೆ. ಮುಂದಿನ ರಾಜ್ಯ ಆಯವ್ಯಯದೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಹೆಚ್ಚಿಸುವಂತೆ ಆಗ್ರಹಿಸುವುದಾಗಿ ಸಚಿವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications